ಕಿರಿಯ ಮಹಿಳಾ ಆರೋಗ್ಯ ಸಹಾಯಕರಿಗೆ ಕಂಪ್ಯೂಟರ್ ಟ್ಯಾಬ್‌ಗಳ ವಿತರಣೆ
ಬೆಂಗಳೂರು, ಡಿ.17: ತಾಯಂದಿರು ಮತ್ತು ಶಿಶುವಿನ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ 7737 ಕಿರಿಯ ಮಹಿಳಾ ಆರೋಗ್ಯ ಸಹಾಯಕರಿಗೆ ಅನುಸರಣಾ ವ್ಯವಸ್ಥೆಯಡಿ ಮಾಹಿತಿ ಸಂಗ್ರಹ, ಸಂರಕ್ಷಣೆ ಮತ್ತು ಸಂವಹನಕ್ಕಾಗಿ ಕಂಪ್ಯೂಟರ್ ಟ್ಯಾಬ್‌ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ.
ಕಂಪ್ಯೂಟರ್ ಟ್ಯಾಬ್ಲೆಟ್‌ಗಳಿಗೆ ಇಂಟರ್‌ನೆಟ್ ಅವಶ್ಯಕತೆ ಇರುವುದರಿಂದ ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಅಂತರ್ಜಾಲ ಸೌಲಭ್ಯ ಸಂಸ್ಥೆಗಳ ಸಿಮ್ ಕಾರ್ಡ್‌ಗಳನ್ನು ಖರೀದಿಸಲು ಅನುಮತಿ ನೀಡಿದೆ. ಇದಕ್ಕೆ ಬೇಕಾದ ಅನುದಾನವನ್ನು, ತಿಂಗಳಿಗೆ ರೂ. 190 ಅನ್ನು, 2018-19 ರ ಸಾಲಿನ ಆರ್‌ಓಪಿ ಲೆಕ್ಕ ಶೀರ್ಷಿಕೆಯಿಂದ ಪಡೆಯಬಹುದಾಗಿದೆ.
ಈ ಟ್ಯಾಬ್ಲೆಟ್‌ಗಳನ್ನು ಉಪಯೋಗಿಸುವ ವಿಧಾನ, ಅಡ್ಡಿ ತೊಡಕುಗಳ ನಿವಾರಣೆ ತಿಳಿಸಲು ಅರ್ಧ ದಿನದ ತರಬೇತಿಯನ್ನು ವಿಭಾಗವಾರು ಆಯೋಜಿಸಲಾಗಿದ್ದು, ಪ್ರತಿ ಜಿಲ್ಲೆಯಿಂದ ಆರ್‌ಸಿಎಚ್‌ಓ, ಡಿಪಿಎಂ, ಬಿಪಿಎಂ, ಎಂ ಅಂಡ್ ಇಗಳನ್ನು ನಿಯೋಜಿಸಲು ಸೂಚಿಸಿದೆ. ಈ ಮಾಹಿತಿಯನ್ನು ಡಿ.19 (ತರಬೇತಿ ಪ್ರಾರಂಭದ ಮುನ್ನ) ನಿರ್ದೇಶನಾಲಯಕ್ಕೆ ಕಳುಹಿಸಿ ಕೊಡಲು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.