ಎಲೆಕ್ಟ್ರಾನಿಕ್ ಸಿಟಿ ಮೇಲು ರಸ್ತೆ ದುರಸ್ತಿ ಕಾಮಗಾರಿ: ಭಾರಿ ವಾಹನಗಳಿಗೆ ಒಂದು ತಿಂಗಳು ನಿರ್ಬಂಧ

Update: 2018-12-18 18:01 GMT

ಬೆಂಗಳೂರು, ಡಿ.18: ಎಲೆಕ್ಟ್ರಾನಿಕ್ ಸಿಟಿ ಮೇಲು ರಸ್ತೆಯಲ್ಲಿ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಸಿಲ್ಕ್‌ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಭಾರಿ ವಾಹನಗಳ ಸಂಚಾರವನ್ನು ಸೋಮವಾರ ತಡರಾತ್ರಿಯಿಂದ ಒಂದು ತಿಂಗಳವರೆಗೆ ನಿರ್ಬಂಧಿಸಲಾಗಿದೆ.

ದ್ವಿಚಕ್ರ ವಾಹನ, ಕಾರು, ಟೆಂಪೊ ಟ್ರಾವೆಲ್ ಸೇರಿ ಲಘು ವಾಹನಗಳು ಮಾತ್ರ ಎಂದಿನಂತೆ ಸಂಚರಿಸಬಹುದಾಗಿದೆ. ಎಲ್ಲ ರೀತಿಯ ಬಸ್‌ಗಳು, ಲಾರಿಗಳು ಸೇರಿದಂತೆ ಭಾರಿ ವಾಹನಗಳನ್ನು ನಿಷೇಧಿಸಲಾಗಿದೆ ಎಂದು ಬಿಇಟಿಪಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶನದ ಅನುಸಾರ ಜಾಯಿಂಟ್‌ಗಳ ನಿರ್ವಹಣಾ ಕೆಲಸವನ್ನು 2019ರ ಮಾರ್ಚ್ 15ರೊಳಗೆ ಮುಗಿಸಬೇಕಿದೆ. ಹೀಗಾಗಿ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. 9ಕಿಮೀ ಉದ್ದದ ರಸ್ತೆಯಲ್ಲಿ ಕಾಮಗಾರಿ ವೇಳೆ ಮೇಲುರಸ್ತೆಯ 1.5ಕಿಮೀ ಮಾರ್ಗದ 1 ಲೇನ್‌ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಆ ಭಾಗದಲ್ಲಿ ಒಂದೇ ಲೇನ್‌ನಲ್ಲಿ ಬ್ಯಾರಿಕೇಡ್ ಹಾಕಿ ಎದುರು-ಬದುರು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಉಳಿದ ಭಾಗದ ರಸ್ತೆಯಲ್ಲಿ ಎಂದಿನಂತೆ ವಾಹನಗಳು ಸಂಚರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News