ಬಾಲಕಿಯರ ಆಶ್ರಯ ಗೃಹಗಳಲ್ಲಿ ಸಿಸಿಟಿವಿ ಕಡ್ಡಾಯ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸೂಚನೆ

Update: 2018-12-18 18:10 GMT

ಬೆಂಗಳೂರು, ಡಿ.18: ಕರ್ನಾಟಕ ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲಿರುವ ಬಾಲಕ, ಬಾಲಕಿಯರ ಆಶ್ರಯ ಗೃಹಗಳಲ್ಲಿ ಸಿಸಿಟಿವಿ ಕಡ್ಡಾಯ ಅಳವಡಿಸುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಎಲ್ಲ ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ.

ಕರ್ನಾಟಕದ 8, ಪಶ್ಚಿಮ ಬಂಗಾಳದ 5, ಒಡಿಶಾದ 8, ಉತ್ತರ ಪ್ರದೇಶ 5 ಬಾಲಿಕಾ ಗೃಹಗಳಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ತನಿಖಾ ಸಮಿತಿಯು ತಪಾಸಣೆ ನಡೆಸಿತ್ತು. ತಪಾಸಣೆಯ ವೇಳೆ ಆಶ್ರಯ ಗೃಹಗಳಲ್ಲಿ ಸಿಸಿಟಿವಿ ಸಮರ್ಪಕವಾಗಿ ಇಲ್ಲದಿರುವುದು ಹಾಗೂ ಆಪ್ತ ಸಮಾಲೋಚಕರ ಕೊರತೆ ಇರುವುದು ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ವಾಸಿಗಳಿಗೆ ಸೂಕ್ತ ಭದ್ರತೆ ಹಾಗೂ ವಾತಾವರಣ ನಿರ್ಮಿಸುವುದಕ್ಕೆ ಆದ್ಯತೆ ಕೊಡಬೇಕೆಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News