ಐಆರ್‌ಸಿಟಿಸಿ ಹಗರಣ: ಲಾಲೂ ಪ್ರಸಾದ್‌ಗೆ ಮಧ್ಯಂತರ ಜಾಮೀನು

Update: 2018-12-20 06:01 GMT

ಹೊಸದಿಲ್ಲಿ, ಡಿ.20: ರೈಲ್ವೆ ಸಚಿವರಾಗಿದ್ದಾಗ ನಡೆದ ಐಆರ್‌ಟಿಸಿ ಹಗರಣಕ್ಕೆ ಸಂಬಂಧಿಸಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್‌ಗೆ ಹೊಸದಿಲ್ಲಿಯ ಪಟಿಯಾಲಾ ಹೌಸ್ ಹೈಕೋರ್ಟ್ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಲಾಲೂ ಪ್ರಸಾದ್ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.

ಇದೇ ಹಗರಣದಲ್ಲಿ ಸಂಬಂಧಿಸಿ ಲಾಲೂ ಪ್ರಸಾದ್‌ರ ಪತ್ನಿ ರಾಬ್ಡಿ ದೇವಿ ಹಾಗೂ ಪುತ್ರ ತೇಜಸ್ವಿ ಯಾದವ್‌ಗೆ ನ್ಯಾಯಾಲಯ ಜಾಮೀನು ನೀಡಿತ್ತು.

ಲಾಲೂ ಪ್ರಸಾದ್ ರೈಲ್ವೆ ಮಂತ್ರಿಯಾಗಿದ್ದಾಗ ಪೂರಿ ಹಾಗೂ ರಾಂಚಿಯಲ್ಲಿರುವ ರೈಲ್ವೆಗೆ ಸೇರಿದ ಎರಡು ಹೊಟೇಲ್‌ಗಳನ್ನು ಮೆಸರ್ಸ್ ಸುಜಾತಾ ಹೊಟೇಲ್ ಪ್ರೈ.ಲಿ.ಗೆ ಲೀಸ್‌ಗೆ ನೀಡಲಾಗಿತ್ತು. ಇದರಲ್ಲಿ ಐಆರ್‌ಸಿಟಿಸಿ ಅಧಿಕಾರಿಗಳು ರೈಲ್ವೇ ಸಚಿವರ ಆದೇಶದ ಮೇರೆಗೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಆರೋಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News