×
Ad

ಹನುಮಾನ್ ಜಯಂತಿ ಆಚರಣೆ: ಪ್ರಸಾದ ವಿತರಣೆ ಜಾಗದಲ್ಲಿ ಸಿಸಿ ಕ್ಯಾಮರಾ

Update: 2018-12-20 22:04 IST

ಬೆಂಗಳೂರು, ಡಿ.20: ಹನುಮಾನ್ ಜಯಂತಿ ಆಚರಣೆಯಲ್ಲಿ ಯಾವುದೇ ವಿಘ್ನಗಳು ಎದುರಾಗಬಾರದೆಂದು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪಾಲಿಕೆ ಸದಸ್ಯೆ ಪದ್ಮಾವತಿ ಶ್ರೀನಿವಾಸ್ ತಿಳಿಸಿದ್ದಾರೆ.

ಗುರುವಾರ ರಾಮಮೂರ್ತಿನಗರ ವಾರ್ಡ್‌ನ ಕಲ್ಕೆರೆಯ ಭಕ್ತ ಆಂಜನೇಯ ದೇವಾಲಯದಲ್ಲಿ, ಹನುಮಾನ್ ಜಯಂತಿ ಪ್ರಯುಕ್ತ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚೆಗಷ್ಟೆ ಪ್ರಸಾದದಲ್ಲಿ ವಿಷ ಬೆರೆಸಿ ಸಾವನ್ನಪ್ಪಿರುವುದನ್ನು ಮನಗಂಡು ಹನುಮಾನ್ ಜಯಂತಿಗೆ ಅಡ್ಡಿಬಾರದೆಂದು ಈ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಹೇಳಿದರು.

ದೇವರ ಮೇಲಿನ ಭಕ್ತಿಯಿಂದ ಜನರು ಪ್ರಸಾದವನ್ನು ಕಣ್ಣಿಗೆ ಮುಟ್ಟಿಕೊಂಡು ಸೇವಿಸುತ್ತಾರೆ. ಇಂತಹ ಪ್ರಸಾದದಲ್ಲಿ ವಿಷ ಬೆರೆಸಿರುವುದು ನಿಜಕ್ಕೂ ಬೇಸರದ ಸಂಗತಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News