×
Ad

ಡಿ.23 ರಂದು ಪುಸ್ತಕಗಳ ಬಿಡುಗಡೆ

Update: 2018-12-20 22:26 IST

ಬೆಂಗಳೂರು, ಡಿ.20: ಅಂಕಿತ ಪುಸ್ತಕ ಪ್ರಕಾಶನ ವತಿಯಿಂದ ಹಿರಿಯ ಲೇಖಕ ಡಾ.ಕೆ.ಎನ್.ಗಣೇಶಯ್ಯ ಅವರ ರಕ್ತ ಸಿಕ್ತ ರತ್ನ ಕಾದಂಬರಿ, ಆರ್ಯವೀರ್ಯ ಕಥಾ ಸಂಕಲನ ಹಾಗೂ ತಾರು ಮಾರು ಲೇಖನಗಳನ್ನೊಳಗೊಂಡ ಕೃತಿಗಳು ಡಿ.23ರಂದು ರವಿವಾರ ಬೆಳಗ್ಗೆ 11.30ಕ್ಕೆ ಬಿಡುಗಡೆಯಾಗಲಿವೆ.

ಸಿನೆಮಾ ನಟ ರಮೇಶ್ ಅರವಿಂದ್ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಂಗಕರ್ಮಿ ಸೇತುರಾಮ್, ಪತ್ರಕರ್ತ ಹರೀಶ್ ಕೇರ ಭಾಗವಹಿಸಲಿದ್ದಾರೆ. ಈ ವೇಳೆ ಲೇಖಕ ಕೆ.ಎನ್.ಗಣೇಶಯ್ಯ ಉಪಸ್ಥಿತರಿರುವರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News