×
Ad

ಚಿತ್ರಕಲಾ ಪರಿಷತ್‌ನಲ್ಲಿ ಕಣ್ಮನ ಸೆಳೆಯುತ್ತಿರುವ ಆಲಂಕಾರಿಕ ವಸ್ತುಗಳು

Update: 2018-12-21 22:01 IST

ಬೆಂಗಳೂರು, ಡಿ.21: ನಗರದ ಚಿತ್ರಕಲಾ ಪರಿಷತ್‌ನಲ್ಲಿ ಮಣ್ಣಿನಿಂದ ಮಾಡಿದ ಆ್ಯಂಟಿಕ್ ಕಿವಿ ಓಲೆ, ಸರಗಳು ಹಾಗೂ ಆಲಂಕಾರಿಕ ವಸ್ತುಗಳು ನೋಡುಗರನ್ನು ಆಕರ್ಷಿಸುತ್ತಿವೆ.

ಶುಕ್ರವಾರ ಚಿತ್ತಾರ ಸಂಸ್ಥೆಯು ಗ್ರಾಂಡ್ ಮಾರ್ಕೆಟ್ ಸಹಯೋಗದೊಂದಿಗೆ ಚಿತ್ರಕಲಾ ಪರಿಷತ್‌ನಲ್ಲಿ ಆರಂಭವಾಗಿರುವ ಅರ್ಬನ್ ಬಝಾರ್ ಇಂದಿನಿಂದ ಡಿ.30 ರವರೆಗೆ ನಡೆಯಲಿದ್ದು, ಮಣ್ಣಿನಿಂದ ಮಾಡಿದ ಆ್ಯಂಟಿಕ್ ಆಭರಣಗಳು, ಖಾದಿ ಹಾಗೂ ಕಾಟನ್ ಸೀರೆಗಳು, ಕುಸುರಿ ಕಲೆಯ ಬಣ್ಣ ಬಣ್ಣದ ಬಳೆಗಳು, ಸರಗಳು ಇನ್ನಿತರ ಆಲಂಕಾರಿಕ ವಸ್ತುಗಳು ಗ್ರಾಹಕರನ್ನು ಸೆಳೆಯುತ್ತಿವೆ.

ಗ್ರಾಹಕರು ಹಾಗೂ ಕರಕುಶಲ ಕರ್ಮಿಗಳ ನಡುವಿನ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅರ್ಬನ್ ಬಝಾರನ್ನು ಆಯೋಜಿಸಲಾಗಿದ್ದು, ನೂರಕ್ಕೂ ಹೆಚ್ಚು ಕರಕುಶಲಕರ್ಮಿಗಳ ಮಳಿಗೆಗಳು ಇವೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಗಳಲ್ಲಿರುವ ಕರಕುಶಲ ಕಲಾವಿದರನ್ನು ಒಂದೇ ವೇದಿಕೆಯಡಿಯಲ್ಲಿ ತರುವ ಉದ್ದೇಶದಿಂದ ಅರ್ಬನ್ ಬಜಾರನ್ನು ಆಯೋಜಿಸಲಾಗಿದೆ ಎಂದು ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು.

ಈ ಬಝಾರ್‌ನಲ್ಲಿ ವುಡನ್ ಫೌಂಟೇನ್, ವುಡನ್ ವಾಚ್‌ಗಳು, ವುಡನ್ ಡ್ರೈಫ್ರೂಟ್ಸ್ ಬಾಕ್ಸ್‌ಗಳು. ತರತರಹದ ಪಿಂಗಾಣಿ ವಸ್ತುಗಳು, ಕೊಲ್ಕತ್ತಾ ಬ್ಯಾಗ್ ಗಳು, ಕನ್ನೂರ್ ಕಾಟನ್ ಕರ್ಟನ್‌ಗಳು, ವಿವಿಧ ರೀತಿಯ ಬೆಡ್ ಶೀಟ್‌ಗಳು ಬಝಾರ್‌ನ ವಿಶೇಷವಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ವೇಳೆ ಹಿರಿಯ ನಟಿ ಪದ್ಮಾವಾಸಂತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News