×
Ad

ಡಿ.23ರಂದು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

Update: 2018-12-21 22:02 IST

ಬೆಂಗಳೂರು, ಡಿ.21: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ಡಿ.23ರಂದು ಬೆಳಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಹೇಮಂತ-ವರ್ಷದ ಲೇಖಕ-2017 ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ, ಕಣ್ವ-ವರ್ಷದ ಪ್ರಕಾಶನ ಪ್ರಶಸ್ತಿಯನ್ನು ನ.ರವಿಕುಮಾರ್ ಹಾಗೂ ಸಂವಹನ-ವರ್ಷದ ಯುವ ಬರಹಗಾರ-2017 ಪ್ರಶಸ್ತಿಯನ್ನು ಆನಂದ ಈ ಕುಂಚನೂರು ಅವರಿಗೆ ಪ್ರದಾನ ಮಾಡಲಾಗುತ್ತದೆ.

ಬಿಡುಗಡೆಗೊಳ್ಳುವ ಕೃತಿಗಳು: ಡಾ.ಚನ್ನಪ್ಪಗೋಳರವರ ಕನ್ನಡ ಸಾಹಿತ್ಯ-ವೈವಿಧ್ಯತೆ ಮತ್ತು ಅನನ್ಯತೆ, ಡಾ.ಸಿ.ಆರ್.ಚಿಲಮಿರವರ ಉತ್ತರ ಕರ್ನಾಟಕ ಹಬ್ಬಗಳು, ನಿಡಸಾಲೆ ಪುಟ್ಟಸ್ವಾಮಯ್ಯರವರ ಹಳ್ಳಿಹೈದನ ವಿದೇಶ ಪ್ರವಾಸ, ಡಾ.ಶಿವಾನಂದ ಕೆಳಗಿನಮನಿರವರ ಕರ್ನಾಟಕ ಮಾತಂಗಿ ಸಂಸ್ಕೃತಿ, ಎಚ್.ಲಕ್ಷ್ಮೀನಾರಾಯಣರವರ ಸಾಣೇಗಲ್ಲು, ಬಿಜಿಎಲ್ ಸ್ವಾಮಿರವರ ಮೀನಾಕ್ಷಿಯ ಸೌಗಂಧ, ಅಂಜನಪ್ಪರವರ ಮೆಂಟಲ್ ಎಬಿಲಿಟಿ ಪ್ಲಸ್, ಡಾ.ರಾಜಶೇಖರ ಮಠಪತಿರವರ ನೀರಮೇಲೆ ನೆನಪ ಬರೆದು, ಎ.ಎನ್.ಪ್ರಸನ್ನರವರ ಚಿತ್ರಕತೆಯ ಸ್ವರೂಪ ಹಾಗೂ ಕೆ.ಕೆ.ಗಂಗಾಧರನ್‌ರವರ ಮಾಫಿಯಾ ಕೃತಿಗಳು ಬಿಡುಗಡೆಗೊಳ್ಳಲಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ರಂಗಕರ್ಮಿ ಡಾ.ಟಿ.ಎಸ್.ನಾಗಾಭರಣ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News