×
Ad

ಡೆಕ್ಕನ್ ಏರ್‌ಸ್ಪೋರ್ಟ್ಸ್ ನಿಂದ ದೇಶದಲ್ಲೇ ಮೊದಲ ಏರ್-ಬಲೂನಿಂಗ್ ತಂತ್ರಜ್ಞಾನ: ಶೇಕ್ ಅಬ್ದುಲ್ ಮಲಿಕ್

Update: 2018-12-21 22:04 IST

ಬೆಂಗಳೂರು, ಡಿ.21: ಡೆಕ್ಕನ್ ಏರ್‌ಸ್ಪೋರ್ಟ್ಸ್ ವತಿಯಿಂದ ದೇಶದಲ್ಲೇ ಮೊದಲ ಬಾರಿಗೆ 4ಡಿ ವಿಆರ್ ಹಾಟ್ ಏರ್-ಬಲೂನಿಂಗ್ ತಂತ್ರಜ್ಞಾನದ ಅನುಭವವನ್ನು ಜನತೆಗೆ ನೀಡಲು ಡಿ.22ರಂದು ನಗರದ ಶಾಂತಿನಿಕೇತನ ಮಾಲ್‌ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಶೇಕ್ ಅಬ್ದುಲ್ ಮಲಿಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಪ್ರಮುಖ ವಿಆರ್ ಅಭಿವೃದ್ಧಿ ಕಂಪೆನಿಗಳಲ್ಲಿ ಒಂದಾದ ಡಿಜಿಟಲ್ ಜಾಲೆಬ್ ಸಹಭಾಗಿತ್ವದಲ್ಲಿ ನಾವು ಥಲ್ಸ್ ವಿಆರ್ ಹಾಟ್ ಏರ್- ಬಲೂನ್‌ರಿಂಗ್ ಅನ್ನು ವಿನ್ಯಾಸಗೊಳಿಸಿದ್ದು, ಬಲೂನ್‌ರಿಂಗ್‌ನಲ್ಲಿ ಕುಳಿತರೆ ಸಾಕು, ವಿಶ್ವದ ಪೂರ್ತಿ ಪ್ರಮಾಣದ ನೈಸರ್ಗಿಕ ವೈವಿಧ್ಯತೆಯನ್ನು ನೈಜವಾಗಿಯೇ ಸವಿಯಬಹುದು ಎಂದು ಹೇಳಿದರು.

ದೃಷ್ಟಿ, ಧ್ವನಿ ಹಾಗೂ ಸ್ಪರ್ಶದ ಮೂಲಕ ವ್ಯಕ್ತಿಯ ಇಂದ್ರಿಯಗಳನ್ನು ಉತ್ತೇಜಿಸಿ ವರ್ಚುವಲ್ ರಿಯಾಲಿಟಿ ಅನುಭವವನ್ನು ಈ ತಂತ್ರಜ್ಞಾನದ ಮೂಲಕ ನೀಡಲಾಗುತ್ತದೆ ಹಾಗೂ ಉಚಿತ ಪ್ರವೇಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 96110 76737 ಅನ್ನು ಸಂಪರ್ಕಿಸಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News