ಕೆಪಿಎಸ್ಸಿಗೆ ಛಲವಾದಿ ಸಮುದಾಯದವರನ್ನು ಆಯ್ಕೆ ಮಾಡುವಂತೆ ಅಹಿಂದ ಒತ್ತಾಯ

Update: 2018-12-21 17:27 GMT

ಬೆಂಗಳೂರು, ಡಿ.21: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ಉತ್ತರ ಕರ್ನಾಟಕದ ಛಲವಾದಿ ಸಮುದಾಯದವರನ್ನು ಆಯ್ಕೆ ಮಾಡಬೇಕೆಂದು ಅಲ್ಪಸಂಖ್ಯಾತ ಹಿಂದುಳಿದ ದಲಿತರ ಸಮಿತಿ ಒತ್ತಾಯ ಮಾಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ದಲಿತರಲ್ಲಿ ಪ್ರಮುಖರಾದ ಛಲವಾದಿ ಸಮುದಾಯದವರಿಗೆ ನಂತರ ಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ಕೋಲಿ, ಗಂಗಾಮತ, ಬೇಡ, ಉಪ್ಪಾರ, ಗೊಲ್ಲ, ಲಂಬಾಣಿ, ಭೋವಿ, ತಿಗಳ, ಮಡಿವಾಳ, ಸವಿತಾ ಸಮಾಜದವರು ಅಧ್ಯಕ್ಷರಾಗಬೇಕು ಎಂದು ಆಗ್ರಹಿಸಿದರು.

ದಕ್ಷಿಣ ಕರ್ನಾಟಕದವರು ಕೆಪಿಎಸ್ಸಿಯಲ್ಲಿ 55 ವರ್ಷ ಅಧ್ಯಕ್ಷರಾಗಿದ್ದಾರೆ. ಉತ್ತರ ಕರ್ನಾಟಕದವರು ಕೇವಲ 12 ವರ್ಷ ಮಾತ್ರ ಅಧ್ಯಕ್ಷರಾಗಿದ್ದಾರೆ. ಇದು ಲೋಕಸೇವಾ ಆಯೋಗದ ಅಧ್ಯಕ್ಷರ ಸ್ಥಾನದ ಬಹು ದೊಡ್ಡ ಪ್ರಾಂತೀಯ ತಾರತಮ್ಯವಾಗಿದೆ. ಅಲ್ಲದೆ, ಗೆಜೆಟೆಡ್ ಹುದ್ದೆಗಳಲ್ಲಿ ಶೇ.86.5ರಷ್ಟು ದಕ್ಷಿಣ ಕರ್ನಾಟಕದ ಪಾಲಾದರೆ, ಶೇ.13.5ರಷ್ಟು ಉತ್ತರ ಕರ್ನಾಟಕದ ಪಾಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದರಿಂದಾಗಿ, ಉತ್ತರ ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ತೀವ್ರ ಅನ್ಯಾಯವಾಗಿದೆ. ಇಂತಹ ಅಸಮತೋಲನ, ಅಸಮಾಧಾನವನ್ನು ಸ್ವಲ್ಪ ಮಟ್ಟಿಗಾದರೂ ಸರಿಪಡಿಸುವ ಜವಾಬ್ದಾರಿ ಕರ್ನಾಟಕ ರಾಜ್ಯ ಸರಕಾರದ ಮೇಲಿದೆ. ಹೀಗಾಗಿ, ಉತ್ತರ ಕರ್ನಾಟಕದ ಛಲವಾದಿ (ಬಲಗೈ) ಸಮುದಾಯದವರನ್ನು ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News