ಈಗ ವಾಟ್ಸ್‌ಆ್ಯಪ್ ವೆಬ್‌ನಲ್ಲಿ ಪಿಐಪಿ ಮೋಡ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಿ

Update: 2018-12-31 11:40 GMT

 ವಾಟ್ಸ್‌ಆ್ಯಪ್ ವೆಬ್ ಬಳಕೆದಾರರಿಗಾಗಿ ತನ್ನ ಪಿಕ್ಚರ್-ಇನ್ ಪಿಕ್ಚರ್(ಪಿಐಪಿ) ಸೌಲಭ್ಯಕ್ಕೆ ವಾಟ್ಸ್‌ಆ್ಯಪ್ ಕೊನೆಗೂ ಚಾಲನೆ ನೀಡಿದೆ. ಸುಮಾರುಒಂದು ವರ್ಷದ ಹಿಂದೆ ಐಒಎಸ್‌ಗೆ ಈ ವೈಶಿಷ್ಟವನ್ನು ಲಭ್ಯವಾಗಿಸಿದ್ದ ವಾಟ್ಸ್‌ಆ್ಯಪ್ ಈಗ ಆ್ಯಂಡ್ರಾಯ್ಡಾ ಬಳಕೆದಾರರಿಗೂ ಈ ಅನುಕೂಲವನ್ನು ಕಲ್ಪಿಸಿದೆ.

ಥರ್ಡ್ ಪಾರ್ಟಿ ಪೇಜ್‌ಗಳನ್ನು ಅಥವಾ ಆ್ಯಪ್‌ಗಳನ್ನು ತೆರೆಯದೆ ಚಾಟ್ ವಿಂಡೋದಲ್ಲಿ ವೀಡಿಯೊಗಳನ್ನು ವೀಕ್ಷಿಸಲು ಪಿಐಪಿ ಮೋಡ್ ಬಳಕೆದಾರರಿಗೆ ಅವಕಾಶವನ್ನು ಒದಗಿಸುತ್ತದೆ.

ವಾಟ್ಸ್‌ಆ್ಯಪ್ ವೆಬ್ ಬಳಕೆದಾರರು ಚಾಟ್ ಮಾಡುತ್ತಲೇ ಅದೇ ವಿಂಡೋದಲ್ಲಿ ಶೇರ್ಡ್‌ ವೀಡಿಯೊವನ್ನು ವೀಕ್ಷಿಸಬಹುದಾಗಿದೆ. ಬಳಕೆದಾರರು ವಿಂಡೋದಿಂದ ನಿರ್ಗಮಿಸದೆ ವಾಟ್ಸ್‌ಆ್ಯಪ್ ವೆಬ್‌ನಲ್ಲಿ ಇನ್‌ಸ್ಟಾಗ್ರಾಂ ಅಥವಾ ಯು ಟ್ಯೂಬ್ ವೀಡಿಯೊಗಳನ್ನು ನೋಡಬಹುದು ಎಂದು ವರದಿಗಳು ತಿಳಿಸಿವೆ.

ವಾಟ್ಸ್‌ಆ್ಯಪ್ ವೆಬ್‌ನ ಇತ್ತೀಚಿನ ಆವೃತ್ತಿ(0.3.1846)ಯಲ್ಲಿ ಪಿಐಪಿ ಸೌಲಭ್ಯ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News