ರಫೇಲ್ ಯುದ್ಧ ವಿಮಾನ ಉತ್ಪಾದನೆ ಸಾಮರ್ಥ್ಯ ನಮಗಿದೆ: ಎಚ್‌ಎಎಲ್ ಅಧ್ಯಕ್ಷ ಆರ್. ಮಾಧವನ್

Update: 2018-12-22 15:14 GMT

ಉದಯಪುರ, ಡಿ. 22: ರಫೇಲ್ ಯುದ್ಧ ವಿಮಾನವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಎಚ್‌ಎಎಲ್ ಹೊಂದಿದೆ. ಆದುದರಿಂದ ಕೇವಲ 36 ವಿಮಾನಗಳ ಪ್ರಸ್ತುತದ ಆದೇಶದಲ್ಲಿ ತಂತ್ರಜ್ಞಾನ ವರ್ಗಾವಣೆ ಪ್ರಶ್ನೆ ಉದ್ಬವಿಸದು ಎಂದು ಎಚ್‌ಎಎಲ್‌ನ ಅಧ್ಯಕ್ಷ ಆರ್. ಮಾಧವನ್ ಶುಕ್ರವಾರ ಹೇಳಿದ್ದಾರೆ.

ಆರಂಭದ ಚರ್ಚೆ ನಡೆದ ಸಂದರ್ಭದಲ್ಲೇ ಯುದ್ಧ ವಿಮಾನಗಳ ಉತ್ಪಾದನೆಗೆ ಎಚ್‌ಎಎಲ್ ಸಮರ್ಥವಾಗಿತ್ತು ಎಂದು ಅವರು ಹೇಳಿದ್ದಾರೆ.

ತುರ್ತಾಗಿ ಯುದ್ಧ ವಿಮಾನಗಳನ್ನು ಖರೀದಿಸುವ ಅನಿವಾರ್ಯತೆ ಇದ್ದುದರಿಂದ 36 ವಿಮಾನಗಳನ್ನು ಪ್ರತ್ಯೇಕವಾಗಿ ಖರೀದಿಸಲು ಪ್ರಸಕ್ತ ಕೇಂದ್ರ ಸರಕಾರ ನಿರ್ಧರಿಸಿತ್ತು ಎಂದು ಅವರು ಹೇಳಿದರು.

36 ವಿಮಾನಗಳಾಗಿರುವುದರಿಂದ ಉತ್ಪಾದನೆಯ ಪ್ರಶ್ನೆ ಉದ್ಬವಿಸದು. 126 ಯುದ್ಧ ವಿಮಾನಗಳಲ್ಲಿ ಕೆಲವನ್ನು ನೇರವಾಗಿ ಖರೀದಿಸಬಹುದಾಗಿತ್ತು. ಇನ್ನು ಕೆಲವನ್ನು ದೇಶದಲ್ಲಿ ಉತ್ಪಾದಿಸಬಹುದಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಪ್ರಸಕ್ತ ಒಪ್ಪಂದದಲ್ಲಿ ಎಚ್‌ಎಎಲ್ ಭಾಗವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿ ನಡೆದ ಎಂಜಿನಿಯರಿಂಗ್ ಸಮಾವೇಶದಲ್ಲಿ ಎಚ್‌ಎಎಲ್ ಅಧ್ಯಕ್ಷರು ಮಾತನಾಡಿದರು.

126 ವಿಮಾನಗಳನ್ನು ಹೊಂದಲು ಯೋಜಿಸಿದ್ದ ಈ ಹಿಂದಿನ ಯುಪಿಎ ಸರಕಾರ ಒಪ್ಪಂದ ಮಾಡಿಕೊಂಡಿದ್ದ ಬೆಲೆಗಿಂತ ಹೆಚ್ಚಿನ ಬೆಲೆಗೆ ಯುದ್ಧ ವಿಮಾನವನ್ನು ಫ್ರೆಂಚ್ ಕಂಪೆನಿ ಡಸಾಲ್ಟ್ ಏವಿಯೇಶನ್‌ನಿಂದ ಮೋದಿ ಸರಕಾರ ಖರೀದಿಸಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News