ಸುಷ್ಮಾ ಸ್ವರಾಜ್ ರ ಹೊಸ ಟ್ವೀಟ್ ನೋಡಿ ತಲೆ ಕೆರೆದುಕೊಂಡ ಟ್ವಿಟರಿಗರು !

Update: 2018-12-22 17:33 GMT

ಹೊಸದಿಲ್ಲಿ, ಡಿ. 22: “ಇದು ಒಂದು ಬಾರಿಯ ಪಾಸ್‌ವರ್ಡ್ ಅಥವಾ ದೇಶದ ಕೋಡ್ ಆಗಿರಬಹುದೇ ? ಅಥವಾ ತಪ್ಪಾಗಿ ಅಪ್‌ಲೋಡ್ ಮಾಡಲಾಗಿದೆಯೇ ?”… ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ಟರ್‌ನಲ್ಲಿ ಶುಕ್ರವಾರ 638781 ಎನ್ನುವ ಸಂಖ್ಯೆಗಳನ್ನು ಪೋಸ್ಟ್ ಮಾಡಿದ ಬಳಿಕ ಟ್ವಿಟರಿಗರು ಹೀಗೆ ತಲೆ ಕೆಡಿಸಿಕೊಂಡಿದ್ದಾರೆ.

ಈ ಟ್ವೀಟ್‌ಗೆ ಸುಷ್ಮಾ ಸ್ವರಾಜ್ ಅವರ 12 ದಶಲಕ್ಷ ಬೆಂಬಲಿಗರು ಹಾಗೂ ಬಳಕೆದಾರರು ಕಮೆಂಟ್ ಮಾಡಿದರು. ಕೆಲವರು ಜೋಕ್ ಮಾಡಿದರು. ಇನ್ನು ಕೆಲವರು ಸಂಖ್ಯೆಯ ಹಿಂದಿ ನ ಅರ್ಥ ಗ್ರಹಿಸಲು ಪ್ರಯತ್ನಿಸಿದರು.

 ಈ ಟ್ವೀಟ್ ಅನ್ನು ಸುಷ್ಮಾ ಸ್ವರಾಜ್ ಅವರು ಅನಂತರ ಅಳಿಸಿದರು. ಸುಷ್ಮಾ ಸ್ವರಾಜ್ ಅವರು ಟ್ವಿಟ್ಟರ್‌ನಲ್ಲಿ ಹೆಚ್ಚು ಕ್ರಿಯಾಶೀಲರಾಗಿರುವ ಸಚಿವೆ. ಪಾಸ್‌ಪೋರ್ಟ್ ಕಳೆದುಕೊಂಡು ವಿದೇಶದಲ್ಲಿ ಸಿಲುಕಿಕೊಂಡ ಭಾರತದ ಪ್ರಜೆಗಳಿಗೆ ಹಿಂದಿರುಗಲು ಹಾಗೂ ವೈದ್ಯಕೀಯ ಚಿಕಿತ್ಸೆಗೆ ಭಾರತಕ್ಕೆ ಭೇಟಿ ನೀಡಲು ಪ್ರಯತ್ನಿಸುತ್ತಿರುವ ವಿದೇಶಿಗರಿಗೆ ನೆರವು ನೀಡುವುದು ಮೊದಲಾದ ಕಾರ್ಯಗಳಿಂದ ಟ್ವಿಟರ್‌ನಲ್ಲಿ ಅವರ ಬೆಂಬಲಿಗರ ಸಂಖ್ಯೆ ಹೆಚ್ಚಾಗಿದೆ.

66 ವರ್ಷ ಹರೆಯದ ಸಚಿವೆ 2010ರಲ್ಲಿ ಸಾಮಾಜಿಕ ಜಾಲ ತಾಣಕ್ಕೆ ಪ್ರವೇಶಿಸಿದ್ದರು. ಈಗ ಅವರಿಗೆ 12 ದಶಲಕ್ಷ ಬೆಂಬಲಿಗರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News