ಅಕ್ರಮ ಮರಳು ಲಾರಿ ತಡೆದ ಗ್ರಾಮ ಲೆಕ್ಕಾಧಿಕಾರಿ ಹತ್ಯೆ: ಲಾರಿ ಚಾಲಕ ಸೆರೆ

Update: 2018-12-23 13:38 GMT

ರಾಯಚೂರು, ಡಿ.23: ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿಯನ್ನು ತಡೆಯಲು ಬಂದ ಗ್ರಾಮ ಲೆಕ್ಕಾಧಿಕಾರಿ ಮೇಲೆ ಲಾರಿ ಹರಿಸಿ ಹತ್ಯೆಗೈದ ಪ್ರಕರಣ ಸಂಬಂಧ ಲಾರಿ ಚಾಲಕನನ್ನು ಮಾನ್ವಿ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ರಂಗಪ್ಪಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ಲಾರಿ ಚಾಲಕ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ (45) ರನ್ನು ಲಾರಿ ಹರಿಸಿ ಹತ್ಯೆಗೈಯಲಾಗಿತ್ತು. 

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದರು. ಶರಣಯ್ಯ ಗೌಡ ಎಂಬವರಿಗೆ ಸೇರಿದ ಲಾರಿ ಚಾಲಕನ ಮೇಲೆ ಗ್ರಾಮ ಲೆಕ್ಕಾಧಿಕಾರಿ ಇಫ್ರಾನ್ ಅಲಿ ದೂರು ನೀಡಿದ ಬೆನ್ನಲ್ಲೆ ಮಾನ್ವಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಪ್ರಕರಣದ ವಿವರ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದ ಬಳಿಯ ತುಂಗಭದ್ರಾ ನದಿ ಒಡಲು ಬಗೆದು ಪ್ರತಿನಿತ್ಯ ನೂರಾರು ಟ್ರಿಪ್ ಲಾರಿ ಮರಳು ರಾಯಚೂರು ಮೂಲಕ ಹೈದರಾಬಾದ್ ಹಾಗೂ ಬೆಂಗಳೂರಿಗೆ ಸಾಗಿಸಲಾಗುತ್ತಿದೆ ಎನ್ನಲಾಗಿದೆ. ಶನಿವಾರ ಮಾನ್ವಿ ತಾಲೂಕಿನ ಬುದ್ದಿನ್ನಿ ಬಳಿ ಲಾರಿ ತಡೆದು ಪರಿಶೀಲಿಸಲು ಮುಂದಾದ ಕಂದಾಯ ಇಲಾಖೆಯ ವಿ.ಎ.ಸಾಹೇಬ್ ಪಟೇಲ್ ರಿಗೆ ಲಾರಿ ಚಾಲಕ ಲಾರಿಯಿಂದ ಢಿಕ್ಕಿ ಹೊಡೆದು ಹತ್ಯೆ ಮಾಡಲಾಯಿತು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News