×
Ad

ಬಾಯಲ್ಲಿ ಕರಗುವ ಮಸಾಲೆ ದೋಸೆ ದೇಹಕ್ಕೇನು ಮಾಡುತ್ತದೆ?

Update: 2018-12-23 22:26 IST

ಬೆಂಗಳೂರು, ಡಿ. 23: ಆ ತೆಳುವಾದ, ಕಾವಲಿಯಲ್ಲಿ ಸಿದ್ಧವಾಗಿ ಪ್ಲೇಟಿಗೆ ಬರುವಾಗ ಹೊಳೆಯುತ್ತಿರುವ, ಒಂದೂವರೆ ಚಮಚದಷ್ಟು ಆಲೂಗಡ್ಡೆ ಪಲ್ಯ ಇಟ್ಟುಕೊಂಡಿರುವ ಮಸಾಲೆ ದೋಸೆಗೆ ಮರುಳಾಗದವರೇ ಇರಲಾರರು. ಈಗ 'ಡಯಟಿಂಗ್' ಕಾಲ. ಏನೇ ತಿನ್ನುವುದಿದ್ದರೂ 'ಅಳೆದೂ ತೂಗಿಯೇ' ತಿನ್ನುವವರು ಹೆಚ್ಚಿನೆಲ್ಲೆಡೆ ಸಿಗುತ್ತಾರೆ.

ಆದರೆ ಬಿಸಿಬಿಸಿ ಮಸಾಲೆ ದೋಸೆ ಎದುರಿಗೆ ಬಂದರೆ ಕ್ಯಾಲರಿ ಲೆಕ್ಕಾಚಾರ ಮರೆತು ಹೋಗುತ್ತದೆ. ಬಾಯಲ್ಲಿ ಕರಗುವ ಮಸಾಲೆ ದೋಸೆ ಹೊಟ್ಟೆ ಸೇರುತ್ತದೆ. ಆದರೆ, ...

ಇನ್ನು ಒಂದು ಮಸಾಲೆ ದೋಸೆಯಿಂದ ಆಕಾಶವೇನೂ ಬಿದ್ದು ಹೋಗಲ್ಲ. ಬೆಳಗ್ಗೆ ಮಸಾಲೆ ದೋಸೆ ತಿಂದರೆ ಅದನ್ನು ಕರಗಿಸಲು ದಿನವಿಡೀ ಇದೆ ಎಂದು ಲೆಕ್ಕ ಹಾಕಿ ಮುನ್ನುಗ್ಗುವವರ ಪಾಲಿಗೆ ಒಂದು ಕೆಟ್ಟ ಸುದ್ದಿ ಇದೆ.

ಆ ಮಸಾಲೆ ದೋಸೆ, ಅದೂ ಬೆಂಗಳೂರಿನಲ್ಲಿ ಸಿಗುವ ಮಸಾಲೆ ದೋಸೆ ಅಂದರೆ ಸುಮ್ಮನೆ ಅಲ್ಲ. ಒಂದು ಮಸಾಲೆ ದೋಸೆ ತಿಂದರೆ ನಿಮ್ಮ ದೇಹಕ್ಕೆ ಇಡೀ ದಿನಕ್ಕೆ ಬೇಕಾಗುವ ಕ್ಯಾಲರಿಯಲ್ಲಿ ಅರ್ಧದಷ್ಟು ನಿಮ್ಮ ದೇಹ ಸೇರುತ್ತದೆ ! ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ಬೇಕಾಗುವ ಕ್ಯಾಲರಿ 2200.  ಒಂದು ಮಸಾಲೆ ದೋಸೆಯಿಂದ ದೇಹಕ್ಕೆ ಸಿಗುವ ಕ್ಯಾಲರಿ 1023 !

ನಾಲ್ಕು ಖಂಡಗಳ ಐದು ದೇಶಗಳ ಫಾಸ್ಟ್ ಫುಡ್ ರೆಸ್ಟೋರೆಂಟ್ ಗಳ ಆಹಾರಗಳ ಅಧ್ಯಯನ ನಡೆಸಿರುವ ತಜ್ಞರ ತಂಡ ಈ ತೀರ್ಪು ನೀಡಿದೆ.

ಬೆಂಗಳೂರಿನ ಸೈಂಟ್ ಜಾನ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪೌಷ್ಟಿಕಾಂಶ ಹಾಗು ಜೀವನ ಶೈಲಿ ಕ್ಲಿನಿಕ್ ಮುಖ್ಯಸ್ಥೆ  ಪ್ರೊ. ರೆಬೆಕ್ಕಾ ಕುರಿಯನ್ ಈ ಸಂಶೋಧನೆಯ ನೇತೃತ್ವ ವಹಿಸಿದವರು. ಈ ಅಧ್ಯಯನದ ವರದಿ ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News