ಡಿ.28 ರಿಂದ ಮೂರು ದಿನ ಮೆಟ್ರೋ ಸೇವೆ ಸ್ಥಗಿತ
ಬೆಂಗಳೂರು, ಡಿ.23: ನಗರದ ಟ್ರಿನಿಟಿ ವೃತ್ತದಲ್ಲಿನ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು ಬಿಟ್ಟಿದ್ದ ಹಾನಿಕಾಂಬ್ ದುರಸ್ತಿ ಕಾರ್ಯವನ್ನು ಡಿ.28 ರಿಂದ ಕೈಗೆತ್ತಿಕೊಳ್ಳಲಿದ್ದು, ಮೂರು ದಿನಗಳ ಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಡಿ.28 ರಂದು ರಾತ್ರಿ 8ರಿಂದ ಡಿ.30ರವರೆಗೆ ಎಂ.ಜಿ. ರಸ್ತೆಯಿಂದ ಇಂದಿರಾನಗರ ನಿಲ್ದಾಣದ ನಡುವೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗುವುದು. ಡಿ.31ರ ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ಸೇವೆ ಎಂದಿನಂತೆ ಪುನರಾರಂಭಗೊಳ್ಳಲಿದೆ. ಈ ಮಧ್ಯೆ ಉಳಿದ ಮಾರ್ಗಗಳಲ್ಲಿ ಮೆಟ್ರೋ ಕಾರ್ಯಾಚರಣೆ ನಡೆಸಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಪ್ರಯಾಣಿಕರ ಅನುಕೂಲ್ಕಕಾಗಿ ಬಿಎಂಆರ್‌ಸಿಎಲ್ ಬೈಯಪ್ಪನಹಳ್ಳಿವರೆಗೆ ಎರಡೂ ಮಾರ್ಗಗಳಲ್ಲಿ 28ರಿಂದ 30ರವರೆಗೆ (ಬರುವ ಮತ್ತು ಹೋಗುವ) ಉಚಿತ ಬಸ್ ಸೇವೆ ಕಲ್ಪಿಸಲಾಗಿದೆ. 28ರಂದು ರಾತ್ರಿ 8ರಿಂದ 11ರವರೆಗೆ ಬಸ್ ಸೇವೆ ಇರಲಿದೆ. ಉತ್ತರ-ದಕ್ಷಿಣದ ಮೆಟ್ರೋ ಪ್ರಯಾಣಿಕರಿಗೆ ಎಂ.ಜಿ.ರಸ್ತೆ ನಿಲ್ದಾಣದ ನಂತರ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಡಿ.28ರ ಸಂಜೆ 6.45 ಕೊನೆಯ ರೈಲು. ಎಂ.ಜಿ. ರಸ್ತೆ-ಇಂದಿರಾನಗರ ನಡುವೆ ಸೇವೆ ಸ್ಥಗಿತಗೊಂಡ ಸಂದರ್ಭದಲ್ಲಿ ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ಎರಡೂ ಬದಿಯಿಂದ ಕನಿಷ್ಠ 6ರಿಂದ ಗರಿಷ್ಠ 15 ನಿಮಿಷಗಳ ಅಂತರದಲ್ಲಿ ರೈಲು ಕಾರ್ಯಾಚರಣೆ ಮಾಡಲಿದೆ ಎಂದು ಪ್ರಕಟನೆ ತಿಳಿಸಿದೆ.