ಸಲ್ಮಾನ್ ಅಲಿ ಇಂಡಿಯನ್ ಐಡಲ್ 10

Update: 2018-12-24 04:55 GMT

ಮುಂಬೈ, ಡಿ.24: ಹತ್ತನೇ ಆವೃತ್ತಿಯ ಗಾಯನ ರಿಯಾಲಿಟಿ ಟಿವಿ ಶೋ ಇಂಡಿಯನ್ ಐಡಲ್‌ ಟ್ರೋಫಿಯನ್ನು ಹರ್ಯಾಣದ ಸಲ್ಮಾನ್ ಅಲಿ ಗೆದ್ದುಕೊಂಡಿದ್ದಾರೆ.

ರವಿವಾರ ರಾತ್ರಿ ನಡೆದ ಫೈನಲ್ ಸುತ್ತಿನಲ್ಲಿ ಐವರು ಸ್ಪರ್ಧಿಗಳಾದ ಸಲ್ಮಾನ್ ಅಲಿ, ನೀಲಾಂಜನ ರಾಯ್, ನಿತಿನ್ ಕುಮಾರ್, ಅಂಕುಶ್ ಭಾರದ್ವಾಜ್ ಹಾಗೂ ವಿಭೋರ್ ಕುಮಾರ್ ಮಧ್ಯೆ ತೀವ್ರ ಪೈಪೋಟಿ ಕಂಡುಬಂದಿತ್ತು. ಅಂತಿಮವಾಗಿ ಹರ್ಯಾಣದ ಮೆವಾಟ್ ಜಿಲ್ಲೆಯ ಸಲ್ಮಾನ್ ಮಿರುಗುವ ಟ್ರೋಫಿಯ ಜೊತೆಗೆ 25 ಲಕ್ಷ ರೂ. ಬಹುಮಾನ ಹಾಗೂ ಡಾಟ್ಸನ್ ಕಾರನ್ನು ತನ್ನದಾಗಿಸಿಕೊಂಡರು.

ಅಂಕುಶ್ ಮೊದಲ ರನ್ನರ್ಸ್‌ಅಪ್ ಹಾಗೂ ನೀಲಾಂಜನ ರಾಯ್ ಎರಡನೇ ರನ್ನರ್ಸ್-ಅಪ್ ಆಗಿ ಆಯ್ಕೆಯಾದರು. ಈ ಇಬ್ಬರು ತಲಾ 5 ಲಕ್ಷ ರೂ. ಬಹುಮಾನ ಮನೆಗೊಯ್ದರು.

ಗ್ರಾಂಡ್ ಫಿನಾಲೆಯಲ್ಲಿ ಅಲ್ಕಾ ಯಾಗ್ನಿಕ್ ವಿಶೇಷ ಪ್ರದರ್ಶನ ನೀಡಿದರು.

ಸೂಪರ್‌ಸ್ಟಾರ್ ಶಾರೂಕ್ ಖಾನ್ ಜೊತೆಗೆ ಬಾಲಿವುಡ್ ಸುಂದರಿಯರಾದ ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮಾ ಟ್ರೋಫಿಯೊಂದಿಗೆ ವೇದಿಕೆಗೆ ಭರ್ಜರಿ ಪ್ರವೇಶ ಪಡೆದರು. ಸ್ಪರ್ಧಿಗಳಲ್ಲೂ ತುಂಬಾ ಉತ್ಸಾಹ ಕಂಡುಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News