×
Ad

ಜ.2 ರಿಂದ ವಾಹನ ನೋಂದಣಿ ಸೇವೆಯಲ್ಲಿ ವ್ಯತ್ಯಯ

Update: 2018-12-26 23:04 IST

ಬೆಂಗಳೂರು, ಡಿ.26: ರಾಜ್ಯ ಸಾರಿಗೆ ಇಲಾಖೆಯು ವಾಹನಗಳ ನೋಂದಣಿ ಸೇವೆಗಳಿಗೆ ಸಂಬಂಧಿಸಿದ ಕೇಂದ್ರೀಕೃತ ಹಾಗೂ ವೆಬ್ ಆಧಾರಿತ ವಾಹನ-4 ತಂತ್ರಾಂಶವನ್ನು ಜಯನಗರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜನವರಿ 11 ರಿಂದ ಪ್ರಾರಂಭಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಜ.2 ರಿಂದ 11 ರವರೆಗೆ ಈ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ವಾಹನ-4 ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಬೆಂಗಳೂರು ನಗರದ ಆರ್.ಟಿ.ಓ. ಕಚೇರಿಗಳಲ್ಲಿ ವಿವಿಧ ಹಂತಗಳಲ್ಲಿ ತಂತ್ರಾಂಶ ಅನುಷ್ಠಾನಕ್ಕೆ ಮುಂದಾಗಿದ್ದು, ಈಗ ಜಯನಗರದ ಆರ್.ಟಿ.ಓ. ಕಚೇರಿಯಲ್ಲಿ ಪ್ರಾರಂಭಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ವಾಹನಗಳ ಹೊಸ ನೋಂದಣಿ, ವಾಹನ ವರ್ಗಾವಣೆ, ವಿಳಾಸ ಬದಲಾವಣೆ, ಎಫ್.ಸಿ. ನೋಂದಣಿ ಪತ್ರ ನವೀಕರಣ, ಎನ್.ಓ.ಸಿ. ವಾಹನ ಸಂಖ್ಯೆ ಮರುನೋಂದಣಿ ಸೇರಿ ಮತ್ತಿತರೆ ಸೇವೆಗಳಿಗೆ ಸಂಬಂಧಿಸಿದಂತೆ ಜಯನಗರ ಆರ್.ಟಿ.ಓ. ಕಚೇರಿಗೆ ವಾಹನ-1 ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿರುವ ಸಾರ್ವಜನಿಕರು ಜ.1 ರೊಳಗೆ ಪೂರ್ತಿ ಮಾಡಬೇಕು. ಅನಂತರದ ಅರ್ಜಿಗಳು ಸ್ವೀಕರಿಸುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News