ಸರಕಾರಿ ದಂತ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ: ಡಿ.28ಕ್ಕೆ ವಜ್ರಮಹೋತ್ಸವ ಸಮಾರಂಭ
Update: 2018-12-26 23:08 IST
ಬೆಂಗಳೂರು, ಡಿ.26: ಸರಕಾರಿ ದಂತ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವಜ್ರಮಹೋತ್ಸವ ಸಮಾರಂಭವನ್ನು ಡಿ.28 ರಂದು ನಗರದ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಎಂ.ಎ.ಶೇಖರ್, ಸರಕಾರ 1954 ರಲ್ಲಿ ಆರಂಭ ಮಾಡಿದ ಸಂಸ್ಥೆಯನ್ನು ಕರ್ನಾಟಕ ದಂತ ವೈದ್ಯಕೀಯ ಪಿತಾಮಹರಾದ ಡಾ.ಎಸ್.ರಾಮಚಂದ್ರರ ದೂರದೃಷ್ಟಿ ಹಾಗೂ ನಿಸ್ವಾರ್ಥ ಸೇವೆಯ ಫಲವಾಗಿ ವಿವಿಯಾಗಿ ಬೆಳೆದಿದ್ದು, ಅದು ಇಂದು 60 ವರ್ಷಗಳು ಪೂರೈಸುತ್ತಿದೆ ಎಂದು ಹೇಳಿದರು.
ವಜ್ರಮಹೋತ್ಸವವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್, ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.