ಮೂರನೇ ಟೆಸ್ಟ್: ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿದ ಭಾರತ

Update: 2018-12-27 06:48 GMT
ರೋಹಿತ್ ಶರ್ಮಾ ಔಟಾಗದೆ 63

ಮೆಲ್ಬೋರ್ನ್, ಡಿ.27: ಆಸ್ಟ್ರೇಲಿಯ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 443 ರನ್ ಗಳಿಸಿರುವ ಭಾರತ ಇನಿಂಗ್ಸ್ ಡಿಕ್ಲೇರ್ ಮಾಡಿದೆ.

ಭಾರತದ ಪರ ಚೇತೇಶ್ವರ ಪೂಜಾರ ಶತಕ(106) ಗಳಿಸಿದರೆ, ನಾಯಕ ವಿರಾಟ್ ಕೊಹ್ಲಿ(82), ಮಾಯಾಂಕ್ ಅಗರ್ವಾಲ್(76), ಹಾಗೂ ರೋಹಿತ್ ಶರ್ಮಾ(ಔಟಾಗದೆ 63)ಅರ್ಧಶತಕಗಳ ಕೊಡುಗೆ ನೀಡಿ ತಂಡದ ಮೊತ್ತ ಹಿಗ್ಗಲು ನೆರವಾದರು.

ಆಸ್ಟ್ರೇಲಿಯದ ಪರ ವೇಗದ ಬೌಲರ್‌ಗಳಾದ ಕಮಿನ್ಸ್(3-72) ಹಾಗೂ ಮಿಚೆಲ್ ಸ್ಟಾರ್ಕ್(2-87) 5 ವಿಕೆಟ್ ಹಂಚಿಕೊಂಡರು.

2ನೇ ದಿನದಾಟವಾದ ಗುರುವಾರ 2 ವಿಕೆಟ್ ನಷ್ಟಕ್ಕೆ 215 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ನಿನ್ನೆಯ ಮೊತ್ತಕ್ಕೆ 228 ರನ್ ಸೇರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News