ಕ್ಯಾಲೆಂಡರ್ ವರ್ಷದಲ್ಲಿ ವಿದೇಶದಲ್ಲಿ ಗರಿಷ್ಠ ರನ್ ಗಳಿಸಿದ ಕೊಹ್ಲಿ

Update: 2018-12-27 10:32 GMT

ಮೆಲ್ಬೋರ್ನ್, ಡಿ.27: ಭಾರತದ ನಾಯಕ ವಿರಾಟ್ ಕೊಹ್ಲಿ ಕ್ಯಾಲೆಂಡರ್ ವರ್ಷದಲ್ಲಿ ವಿದೇಶಿ ನೆಲದಲ್ಲಿ ಗರಿಷ್ಠ ರನ್ ಗಳಿಸುವುದರೊಂದಿಗೆ ಮಾಜಿ ನಾಯಕ ರಾಹುಲ್ ದ್ರಾವಿಡ್‌ರ ದಾಖಲೆಯೊಂದನ್ನು ಮುರಿದರು.

ಬಲಗೈ ದಾಂಡಿಗ ಕೊಹ್ಲಿ ಎಂಸಿಜಿಯಲ್ಲಿ ಗುರುವಾರ ನಡೆದ 3ನೇ ಟೆಸ್ಟ್‌ನ 2ನೇ ದಿನದಾಟದಲ್ಲಿ 82 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದರು.

ಕೊಹ್ಲಿ ವಿದೇಶಿ ನೆಲದಲ್ಲಿ 1,138 ರನ್ ಗಳಿಸಿದರು. 2002ರಲ್ಲಿ 1,137 ರನ್ ಕಲೆ ಹಾಕಿದ್ದ ದ್ರಾವಿಡ್ ದಾಖಲೆಯನ್ನು ಮುರಿದರು.

ಕೊಹ್ಲಿ ಹಾಗೂ ದ್ರಾವಿಡ್‌ರಲ್ಲದೆ, ಮೊಹಿಂದರ್ ಅಮರನಾಥ್(1,065 ರನ್, 1983) ಹಾಗೂ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್(918 ರನ್,1971)ಈ ಸಾಧನೆ ಮಾಡಿದ್ದಾರೆ.

ಕೊಹ್ಲಿ ವೇಗದ ಬೌಲರ್ ಮಿಚೆಲ್ ಸ್ಟಾಕ್‌ಗೆ 92 ರನ್‌ಗೆ ಔಟಾದ ಕಾರಣ 8 ರನ್‌ನಿಂದ 26ನೇ ಶತಕ ವಂಚಿತರಾದರು. ಈಗಾಗಲೇ ಆಸೀಸ್‌ನಲ್ಲಿ 6 ಶತಕಗಳನ್ನು ಸಿಡಿಸಿರುವ 30ರ ಹರೆಯದ ಕೊಹ್ಲಿ ಈಗಾಗಲೇ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಪ್ರಸ್ತುತ ಸರಣಿಯಲ್ಲಿ ಪರ್ತ್‌ನಲ್ಲಿ ನಡೆದ 2ನೇ ಪಂದ್ಯದಲ್ಲಿ ಕೊಹ್ಲಿ ಶತಕ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News