ಗಣ್ಯರ ಜತೆಗಿರುವ ಫೋಟೊ ತೋರಿಸಿ ಕೆಲಸ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ

Update: 2018-12-27 13:56 GMT

ಬೆಂಗಳೂರು, ಡಿ.27: ಗಣ್ಯರೊಂದಿಗೆ ಫೋಟೊ ತೆಗೆಸಿಕೊಂಡು ಇವರೆಲ್ಲರೂ ತಮಗೆ ಚಿರಪರಿಚಿತರು ಎಂದು ಸುಳ್ಳು ಹೇಳಿ ನೌಕರಿ ಕೊಡಿಸುವ ನೆಪವೊಡ್ಡಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಜುನಾಥ ಬಂಧಿತ ಆರೋಪಿ. ನಿರುದ್ಯೋಗಿ ಯುವಕರನ್ನ ಗುರಿಯಾಗಿಸಿಕೊಂಡು ಅವರುಗಳಿಗೆ ತಾನು ಮುಖ್ಯಮಂತ್ರಿ ಪಿಎ ಆಗಿದ್ದು, ರಾಜ್ಯ ಸರಕಾರಿ ನೌಕರರ ಉಪಾಧ್ಯಕ್ಷ ಕೂಡ ಆಗಿದ್ದೇನೆ ಎಂದು ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ಹಣ ಪಡೆದು ಮೋಸ ಮಾಡಿದ್ದ. ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಗಂಭೀರತೆ ಅರಿತ ಪೊಲೀಸ್ ಇಲಾಖೆ ಸಿಸಿಬಿಗೆ ವರ್ಗಾವಣೆ ಮಾಡಿತ್ತು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿಎಂ ಸಚಿವರ ಜತೆ ತೆಗೆಸಿಕೊಂಡಿದ್ದ ಫೋಟೋ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುತ್ತಿದ್ದ. ನಂತರ ಉದ್ಯೋಗ ಆಕಾಂಕ್ಷಿಗಳನ್ನು ಬಲೆಗೆ ಕೆಡವಿಕೊಂಡು ಸ್ಟಾರ್ ಹೊಟೇಲ್‌ನಲ್ಲಿ ಆತಿಥ್ಯ ಕೊಡಿಸಿ ಮಂಜನಾಥ್ ಟೋಪಿ ಹಾಕುತ್ತಿದ್ದ. ಈತ ಕೆಲ ದಿನಗಳ ಹಿಂದಷ್ಟೇ ಪಿಡಿಒ ಕೆಲಸ ಕೊಡಿಸುವುದಾಗಿ 6 ಲಕ್ಷ ರೂ. ಹನುಮಂತ ಎಂಬಾತನಿಂದ ಪಡೆದಿದ್ದ. ಈ ಸಂಬಂಧ ವಿಜಯಪುರ ರಾಜು ಎಲ್. ಜಾದವ್ ಎಂಬುವರು ಸಿಎಂಗೆ ದೂರು ನೀಡಿದ್ದರು. ಇದೀಗ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News