ಡಿ.28 ರಿಂದ ಮೂರು ದಿನ ಮೆಟ್ರೋ ಸೇವೆ ಸ್ಥಗಿತ

Update: 2018-12-27 16:14 GMT

ಬೆಂಗಳೂರು, ಡಿ 27: ನಗರದ ಎಂಜಿ ರಸ್ತೆಯಲ್ಲಿರುವ ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ಬಿರುಕು ಬಿಟ್ಟ ಪಿಲ್ಲರ್ ಬೀಮ್‌ನ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಿರುವ ಹಿನ್ನೆಲೆಯಲ್ಲಿ ಡಿ.28 ರಿಂದ ಮೂರು ದಿನಗಳು ಎಂಜಿ ರಸ್ತೆ-ಇಂದಿರಾನಗರದ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ.

ಸುಮಾರು ದಿನಗಳ ಹಿಂದೆ ಟ್ರಿನಿಟಿ ವೃತ್ತದಲ್ಲಿರುವ ಮೆಟ್ರೋ ಪಿಲ್ಲರ್ ಬೀಮ್‌ನಲ್ಲಿ ಬಿರುಕು ಕಾಣಿಸಿಕೊಂಡು ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿತ್ತು. ಈ ಸಂಬಂಧ ತಜ್ಞರು ಪರಿಶೀಲನೆ ನಡೆಸಿ, ಯೋಜನಾ ವರದಿ ತಯಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ದುರಸ್ಥಿ ಕಾರ್ಯ ಕೈಗೊಳ್ಳಲಿದ್ದಾರೆ.

ಶುಕ್ರವಾರ ನಾಯಂಡಹಳ್ಳಿಯ ಮೈಸೂರು ರಸ್ತೆಯ ನಿಲ್ದಾಣದಿಂದ ಸಂಜೆ 7.30 ಕ್ಕೆ ಹೊರಡುವ ರೈಲು ಬೈಯಪ್ಪನಹಳ್ಳಿಗೆ ಹೋಗುತ್ತದೆ. ಅನಂತರ ಹೊರಡುವ ಎಲ್ಲ ರೈಲುಗಳು ಎಂ.ಜಿ.ರಸ್ತೆಯಲ್ಲಿ ಕೊನೆಗೊಳ್ಳುತ್ತವೆ. ಬೈಯಪ್ಪನಹಳ್ಳಿಯಿಂದ ಸಂಜೆ 7.45 ಕ್ಕೆ ಹೊರಡುವ ರೈಲು ಮೈಸೂರು ರಸ್ತೆವರೆಗೂ ಸಂಚರಿಸಲಿದ್ದು, ಅನಂತರ ರೈಲುಗಳು ಇಂದಿರಾನಗರ ನಿಲ್ದಾಣಕ್ಕೆ ಕೊನೆಗೊಳ್ಳಲಿವೆ. ಈ ಮಾರ್ಗ ಹೊರತುಪಡಿಸಿ ಉಳಿದೆಲ್ಲಾ ಮಾರ್ಗಗಳಲ್ಲಿ ರೈಲು ಸಂಚಾರ ಎಂದಿನಂತೆ ಮುಂದುವರೆಯಲಿದೆ. ಮೆಟ್ರೋ ಸೇವೆ ಸ್ಥಗಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅನುಕೂಲವಾಗಲು ಬಿಎಂಆರ್‌ಸಿಎಲ್ ಡಿ.28 ರಾತ್ರಿಯಿಂದ 30 ರವರೆಗೆ ಕಬ್ಬನ್ ಪಾರ್ಕಿನಿಂದ ಬೈಯ್ಯಪ್ಪನಹಳ್ಳಿವರೆಗೆ ರಾತ್ರಿ 8 ರಿಂದ 11 ರವರೆಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News