ಕೆಎಸ್ಸಾರ್ಟಿಸಿ ನೌಕರರ ಮಕ್ಕಳ ಪ್ರೋತ್ಸಾಹ ಧನ ಹೆಚ್ಚಳ

Update: 2018-12-27 16:35 GMT

ಬೆಂಗಳೂರು, ಡಿ.27: ಅತಿ ಹೆಚ್ಚು ಅಂಕ ಗಳಿಸಿದ ಕೆಎಸ್ಸಾರ್ಟಿಸಿ ನೌಕರರ ಮತ್ತು ಅಧಿಕಾರಿಗಳ ಮಕ್ಕಳಿಗೆ ನೀಡುವ ನಗದು ಪುರಸ್ಕಾರದ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ ಹಾಗೂ ಪ್ರಸಕ್ತ ವರ್ಷದಿಂದ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ನೌಕರರ ಮತ್ತು ಅಧಿಕಾರಿಗಳ ಮಕ್ಕಳಿಗೂ ನಗದು ಪುರಸ್ಕಾರ ನೀಡಲಾಗುತ್ತಿದೆ.

ಕೆಎಸ್ಸಾರ್ಟಿಸಿ ಕಾರ್ಮಿಕ ಕಲ್ಯಾಣ ಯೋಜನೆ ಅಡಿಯಲ್ಲಿ ನೌಕರರ ಮತ್ತು ಅಧಿಕಾರಿಗಳ ಮಕ್ಕಳಿಗೆ ನಗದು ಪುರಸ್ಕಾರ ನೀಡುವ ಯೋಜನೆಯಿದ್ದು, ಪ್ರತಿ ವರ್ಷವೂ ಸರಾಸರಿ 1000 ವಿದ್ಯಾರ್ಥಿಗಳಿಗೆ ರೂ.25.00 ಲಕ್ಷಗಳಷ್ಟು ನಗದು ಪುರಸ್ಕಾರವನ್ನು ವಿತರಿಸಲಾಗುತ್ತಿದೆ. ಪ್ರಸಕ್ತ ವರ್ಷದಿಂದ ಸಿಬ್ಬಂದಿಗಳ ಮಕ್ಕಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಗದು ಪುರಸ್ಕಾರದ ಮೊತ್ತವನ್ನು ಹೆಚ್ಚಿಸಲಾಗಿದೆ.

ಎಸೆಸ್ಸೆಲ್ಸಿ: ಶೇ.70-80 ಪಡೆದ ಇಂಗ್ಲಿಷ್ ಮಾಧ್ಯಮವರಿಗೆ 2000, ಕನ್ನಡ ಮಾಧ್ಯಮ 2500, ಶೇ.80-90 ಪಡೆದ ಇಂಗ್ಲಿಷ್ ಮಾಧ್ಯಮದವರಿಗೆ 3000 ಕನ್ನಡ ಮಾಧ್ಯಮದವರಿಗೆ 3500 ಹಾಗೂ ಶೇ.90 ಕ್ಕಿಂತ ಅಧಿಕ ಪಡೆದ ಇಂಗ್ಲಿಷ್ ಮಾಧ್ಯಮದವರಿಗೆ 3500, ಕನ್ನಡ ಮಾಧ್ಯಮದವರಿಗೆ 4000 ನೀಡಲಾಗುತ್ತದೆ.

ಪಿಯುಸಿ: ಶೇ.70-80 ಪಡೆದ ಇಂಗ್ಲಿಷ್ ಮಾಧ್ಯಮವರಿಗೆ 2500, ಕನ್ನಡ ಮಾಧ್ಯಮ 3000, ಶೇ.80-90 ಪಡೆದ ಇಂಗ್ಲಿಷ್ ಮಾಧ್ಯಮದವರಿಗೆ 3500 ಕನ್ನಡ ಮಾಧ್ಯಮದವರಿಗೆ 4000 ಹಾಗೂ ಶೇ.90 ಕ್ಕಿಂತ ಅಧಿಕ ಪಡೆದ ಇಂಗ್ಲಿಷ್ ಮಾಧ್ಯಮದವರಿಗೆ 4000, ಕನ್ನಡ ಮಾಧ್ಯಮದವರಿಗೆ 4500 ನೀಡಲಾಗುತ್ತದೆ. ಅಲ್ಲದೆ, ಶೇ.60 ಕ್ಕಿಂತ ಅಧಿಕ ಅಂಕ ಪಡೆದ ಪದವಿ ಇಂಗ್ಲಿಷ್ ಮಾಧ್ಯಮದವರಿಗೆ 4500 ಹಾಗೂ ಕನ್ನಡ ಮಾಧ್ಯಮದವರಿಗೆ 5000 ಮತ್ತು ಸ್ನಾತಕೋತ್ತರ ಪದವಿಯಲ್ಲಿ 6000 ನೀಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News