ಅಲ್ಪಸಂಖ್ಯಾತ ಯುವಜನತೆಗೆ ಕೌಶಲ್ಯ ಅಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

Update: 2018-12-28 17:36 GMT

ಬೆಂಗಳೂರು, ಡಿ.28: ಅಲ್ಪಸಂಖ್ಯಾತರ ಯುವಕ/ಯುವತಿಯರಿಗಾಗಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಅಲ್ಪಸಂಖ್ಯಾತರ ಇಲಾಖಾ ವತಿಯಿಂದ ಆಧಿತ್ಯ ಕೌಲ್ ಸೆಂಟರ್ ಪ್ರೈ. ಲಿ. (ಎಸಿಸಿಪಿಎಲ್) ಸಂಸ್ಥೆಯ ಮೂಲಕ ವಿವಿಧ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಸಿಖ್ಖರು, ಮತ್ತು ಪಾರ್ಸಿ ಅಭ್ಯರ್ಥಿಗಳಿಗೆ ಅಲ್ಪಸಂಖ್ಯಾತರ ಇಲಾಖಾವತಿಯಿಂದ 3 ರಿಂದ 4 ತಿಂಗಳ ಉಚಿತ ತರಬೇತಿ ನೀಡಲಾಗುವುದು. ಅರ್ಜಿ ನಮೂನೆಯನ್ನು ಅಭ್ಯರ್ಥಿಗಳು https://gokdom.kar.nic.in ನಲ್ಲಿ ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ. 080-22866718 ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News