ಮೌಲ್ಯ ಮಾಪಕರ ಹಾಜರಾತಿ ಕಡ್ಡಾಯ: ಬೆಂಗಳೂರು ವಿವಿ
ಬೆಂಗಳೂರು, ಡಿ.29: ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ಪದವಿ ಪರೀಕ್ಷೆಯ ಮೌಲ್ಯಮಾಪನ ಡಿ.31ರಿಂದ ಪ್ರಾರಂಭವಾಗಲಿದ್ದು, ಈಗಾಗಲೇ ಗುರುತಿಸಿರುವ ವಿಷಯವಾರು ಮೌಲ್ಯಮಾಪನ ಕೇಂದ್ರಗಳಿಗೆ ಅರ್ಹ ಮೌಲ್ಯ ಮಾಪಕರು ಕಡ್ಡಾಯವಾಗಿ ಹಾಜರಾಗಲು ಬೆಂ. ವಿವಿ ತಿಳಿಸಿದೆ.
ವಿಶ್ವವಿದ್ಯಾಲಯವು ಅರ್ಹ ಮೌಲ್ಯಮಾಪಕರಿಗೆ ನೇಮಕಾತಿ ಪತ್ರಗಳನ್ನು ಕಳುಹಿಸಲಾಗಿದೆ. ಬೋರ್ಡ್ ಆಫ್ ಎಕ್ಸಾಮಿನರ್ ಅಧ್ಯಕ್ಷರನ್ನು ಸಂಪರ್ಕಿಸಿ ಮೌಲ್ಯಮಾಪನ ಕೆಲಸ ಮುಗಿಸಲು ಕೋರಲಾಗಿದೆ.
ಸಂಬಂಧಪಟ್ಟ ಪ್ರಾಚಾರ್ಯರಗಳು ಅರ್ಹ ಮೌಲ್ಯಮಾಪಕರಿಗೆ ಅನುಮತಿ ನೀಡದಿದ್ದರೆ, ಮೌಲ್ಯಮಾಪಕರು ಕಡ್ಡಾಯವಾಗಿ ಹಾಜರಾಗದಿದ್ದರೆ ಕೆಎಸ್‌ಯು ಆಕ್ಟ್ 2000 ಅಧ್ಯಾಯ 13, ಸೆಕ್ಸ್‌ನ್ 74ರ ಹಾಗೂ ವಿಶ್ವವಿದ್ಯಾಲಯ ಪರೀಕ್ಷಾ ನಿಯಾಮವಳಿ 2011ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಲಾಗಿದೆ.
ಒಂದು ವೇಳೆ ಮೌಲ್ಯಮಾಪಕರನ್ನು ಕಳುಹಿಸದಿದ್ದರೆ ತಮ್ಮ ಕಾಲೇಜಿನ ಫಲಿತಾಂಶವನ್ನು, ಸಂಯೋಜನ ನವೀಕರಣವನ್ನು ತಡೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಸರಕಾರಿ ಹಾಗೂ ಅರೆಸರಕಾರಿ ಕಾಲೇಜುಗಳ ಪ್ರಾಧ್ಯಾಪಕರುಗಳು ಹಾಜರಾಗದಿದ್ದರೆ ಆಯುಕ್ತರು ಕಾಲೇಜು ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಇವರಿಗೆ ವೇತನ ತಡೆ ಹಿಡಿಯುವಂತೆ ತಿಳಿಸಲಾಗುತ್ತದೆ.
ಪ್ರಾರ್ಚಾರ್ಯರು ಅರ್ಹ ಮೌಲ್ಯಮಾಪಕರನ್ನು ಅಂದರೆ 3 ವರ್ಷ ಪೂರ್ಣಾವಧಿ ಸೇವೆ, 5 ವರ್ಷ ಅಲ್ಪಾವಧಿ ಸೇವೆ ಮಾಡಿರುವವರು ರವಿವಾರ, ರಜಾ ದಿನಗಳೂ ಸೇರಿದಂತೆ ಮೌಲ್ಯಮಾಪನಕ್ಕೆ ಹಾಜರಾಗಬೇಕೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.