ನೂತನ ವರ್ಷಾಚರಣೆಗೆ ಬಿಎಂಟಿಸಿ ಕೊಡುಗೆ: ಡಿ.31ರಂದು ತಡರಾತ್ರಿ 2ರ ವರೆಗೆ ಬಸ್ ಸಂಚಾರ

Update: 2018-12-30 14:07 GMT

ಬೆಂಗಳೂರು, ಡಿ.30: ಹೊಸ ವರ್ಷಾಚರಣೆಯ ಪ್ರಯುಕ್ತ ಬಿಎಂಟಿಸಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಡಿ.31ರಂದು 11 ಮಾರ್ಗಗಳಲ್ಲಿ ತಡರಾತ್ರಿ 2ಗಂಟೆಯವರೆಗೆ ಬಸ್ ಸಂಚಾರವನ್ನು ವಿಸ್ತರಿಸಿದೆ.

ಜನತೆ ಹೊಸ ವರ್ಷಾಚರಣೆಯನ್ನು ಸಂಭ್ರಮಿಸಲು ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಸುತ್ತಮುತ್ತ ಪ್ರದೇಶಗಳಿಗೆ ಆಗಮಿಸುವುದು ಹೆಚ್ಚು. ಹೀಗಾಗಿ ಈ ಮಾರ್ಗಗಳಲ್ಲಿ ಬಸ್ ಬಂಚಾರವನ್ನು ತಡರಾತ್ರಿವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಪ್ರಯಾಣಿಕರು ಎಂಜಿ ರಸ್ತೆಯಿಂದ ಕಾಡುಗೋಡಿ(ಎ-1), ಸರ್ಜಾಪುರ (ಎ-2), ಕೆಂಗೇರಿ (ಎ-6), ಜನಪ್ರಿಯ ಟೌನ್‌ಶಿಪ್ (ಎ-7), ನೆಲಮಂಗಲ (ಎ-8), ಯಲಹಂಕ ಸ್ಯಾಟಲೈಟ್ ಟೌನ್(ಎ-9), ಆರ್ಕೆ ಹೆಗ್ಡೆ ನಗರ (ಎ-10), ಬಗಲೂರು(ಎ-11), ಹೊಸಕೋಟೆ (ಎ-12) ನಂಬರ್‌ನ ಬಸ್‌ಗಳು ಸಂಚರಿಸಲಿವೆ. ಇನ್ನೂ ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಯಿಂದ ಸಿಟಿ (ಎ-3) ಮತ್ತು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ಗೆ( ಎ-4) ನಂಬರ್ ಬಸ್ ಸಂಚರಿಸಲಿವೆ. ಪ್ರಯಾಣಿಕರು ಬಿಎಂಟಿಸಿ ಬಸ್‌ಗಳ ಸೌಕರ್ಯವನ್ನು ಪಡೆದುಕೊಳ್ಳಬಹುುಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News