×
Ad

ಜ.6 ರಂದು ಸಿರಿಧಾನ್ಯಗಳ ಕುರಿತು ಜಾಗೃತಿ ಮೂಡಿಸಲು ಸ್ಮಾರ್ಟ್‌ರನ್

Update: 2018-12-30 21:47 IST

ಬೆಂಗಳೂರು, ಡಿ.30: ರಾಜ್ಯಾದ್ಯಂತ ಸಿರಿಧಾನ್ಯಗಳ ಕುರಿತ ಜಾಗೃತಿ ಹೆಚ್ಚಾಗಿ ನಡೆಯುತ್ತಿದೆ. ಅದರೊಂದಿಗೆ ಸಿಲಿಕಾಲ್ ಸಿಟಿಯಲ್ಲಿ ವಿಶೇಷವಾಗಿ ಸ್ಮಾರ್ಟ್ ರನ್ ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸಲು ಕೃಷಿ ಇಲಾಖೆ ಮುಂದಾಗಿದೆ.

ಜ.18 ರಿಂದ ಮೂರು ದಿನಗಳ ಕಾಲ ನಡೆಯುವ ಸಾವಯವ ಪದಾರ್ಥಗಳ ಹಾಗೂ ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೂ ಪೂರ್ವಭಾವಿಯಾಗಿ ಜ.6 ರಂದು ಕರ್ನಾಟಕ ಕೃಷಿ ಇಲಾಕೆಯು ಸ್ಮಾರ್ಟ್‌ರನ್ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಬಾಲಿವುಡ್ ನಟ ಮಿಲಿಂದ್ ಸೋಮನ್ ಸಾಥ್ ನೀಡುತ್ತಿದ್ದಾರೆ.

ಐದು ಕಿ.ಮೀ.ದೂರದ ಓಟ ಇದಾಗಿದ್ದು, ಅಂದು ನಗರದ ವಿಧಾನಸೌಧದ ಬಳಿಯ ಕಬ್ಬನ್‌ಪಾರ್ಕ್ ಬಸ್ ನಿಲ್ದಾಣದ ಬಳಿ ಸಂಜೆ 6-30ಕ್ಕೆ ರನ್‌ಗೆ ಚಾಲನೆ ನೀಡಲಾಗುತ್ತದೆ. ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ, ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ಮತ್ತು ಇತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅದರಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು www.organics-millet.in ರಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಸಾರ್ವಜನಿಕರಲ್ಲಿ ಸಿರಿ ಧಾನ್ಯಗಳನ್ನು ಕುರಿತು ಜಾಗತಿ ಮೂಡಿಸಲು ಸ್ಮಾರ್ಟ್ ರನ್ 2019 ಆಯೋಜಿಸಲಾಗುತ್ತಿದೆ. ಈ ಓಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತೇನೆ. ಪಾಲ್ಗೊಳ್ಳುವವರಿಗೆ ಉಚಿತ ಟಿ ಶರ್ಟ್ ಮತ್ತು ಸಾವಯವ ಸಿರಿಧಾನ್ಯದ ಬೆಳಗಿನ ತಿಂಡಿಯನ್ನು ನೀಡಲಾಗುವುದು. ಬರುವವರು ಎಲ್ಲರೂ ಬಾಟಲಿಗಳಲ್ಲಿ ನೀರು ಅಥವ ಹಣ್ಣಿನ ರಸವನ್ನು ತರಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News