×
Ad

ಐಡಿಎಫ್‌ಸಿ ಬ್ಯಾಂಕ್-ಕ್ಯಾಪಿಟಲ್ ಫಸ್ಟ್ ಲಿಮಿಟೆಡ್‌ ವಿಲೀನಕ್ಕೆ ಅಂಗೀಕಾರ

Update: 2018-12-30 21:51 IST

ಬೆಂಗಳೂರು, ಡಿ 30: ಐಡಿಎಫ್‌ಸಿ ಬ್ಯಾಂಕ್ ಮತ್ತು ಕ್ಯಾಪಿಟಲ್ ಫಸ್ಟ್ ಲಿಮಿಟೆಡ್‌ಗಳು ವಿಲೀನಗೊಳ್ಳಲು ಷೇರುದಾರರ ರಸೀತಿ ಮತ್ತು ನಿಯಂತ್ರಣ ಸಂಸ್ಥೆಗಳ ಅಂಗೀಕಾರ ಸಿಕ್ಕಿದ್ದು, ವಿಲೀನಗೊಳ್ಳುವುದನ್ನು ಘೋಷಿಸಿಕೊಂಡಿದೆ.

ವಿಲೀನಗೊಂಡ ಸಂಸ್ಥೆಯು ಇನ್ನು ಮುಂದೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಎಂದು ನಾಮಾಂಕಿತಗೊಳ್ಳಲಿದೆ. ಇದಕ್ಕೆ ಷೇರುದಾರರ ಒಪ್ಪಿಗೆಯೊಂದು ಬಾಕಿಯಿದೆ. ಈ ವಿಲೀನದ ಬಳಿಕ, ಕ್ಯಾಪಿಟಲ್ ಫಸ್ಟ್ ಅಧ್ಯಕ್ಷ ವೈದ್ಯನಾಥನ್ ಅವರನ್ನು ವಿಲೀನಗೊಂಡ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ನೇಮಿಸುವ ಬಗ್ಗೆ ಐಡಿಎಫ್‌ಸಿ ಮಂಡಳಿ ಒಪ್ಪಿಗೆ ನೀಡಿದೆ. ಇದಕ್ಕೂ ಷೇರುದಾರರ ಒಪ್ಪಿಗೆ ಬಾಕಿ ಇದೆ.

ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಇನ್ನು ಮುಂದೆ ಬಹು ವಿಸ್ತೃತ ಚಿಲ್ಲರೆ ಮತ್ತು ರಖಂ ಬ್ಯಾಂಕಿಂಗ್ ಉತ್ಪನ್ನ, ಸೇವೆ ಮತ್ತು ಡಿಜಿಟಲ್ ಹೊಸತನವನ್ನು ದೊಡ್ಡ ಪ್ರಮಾಣದ ಗ್ರಾಹಕ ವಲಯಕ್ಕೆ ನೀಡಲಿದೆ.

ದೇಶದ ನಗರ ಮತ್ತು ಗ್ರಾಮೀಣ ಭಾಗದಲ್ಲಿರುವ 203 ಶಾಖೆಗಳು, 129 ಎಟಿಎಂಗಳು ಮತ್ತು 454 ಗ್ರಾಮೀಣ ವ್ಯವಹಾರ ಪ್ರತಿನಿಧಿ ಕೇಂದ್ರಗಳ ಮೂಲಕ 7.2 ಮಿಲಿಯನ್ ಗ್ರಾಹಕರಿಗೆ ತನ್ನ ಸೇವೆ ಸಲ್ಲಿಸಲಿದೆ.

ಈ ಬಗ್ಗೆ ಮಾತನಾಡಿದ ವೈದ್ಯನಾಥನ್, ಈ ಲೀನದ ಬಳಿಕ ನಮ್ಮ ಬ್ಯಾಂಕಿಂಗ್ ಸಾಮರ್ಥ್ಯವನ್ನು ಬಲಪಡಿಸಲು ತುಂಬಾ ಅವಕಾಶಗಳು ಸಿಗಲಿವೆ. ಅತಿದೊಡ್ಡ ಸಾರ್ವತ್ರಿಕ ಬ್ಯಾಂಕ್ ರೀತಿ ಕಾರ್ಯನಿರ್ವಸಬಹುದು. ಇದರಿಂದ ನಮ್ಮ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News