×
Ad

ಬೈಕ್ ಕಳ್ಳರ ಹಾವಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Update: 2018-12-31 19:54 IST

ಬೆಂಗಳೂರು, ಡಿ.31: ನಗರದಲ್ಲಿ ದಿನದಿಂದ ದಿನಕ್ಕೆ ಬೈಕ್ ಕಳ್ಳರ ಹಾವಳಿ ಅಧಿಕವಾಗುತ್ತಿದ್ದು, ನಗರದ ಗುರಪ್ಪನಪಾಳ್ಯದಲ್ಲಿ ದುಷ್ಕರ್ಮಿಗಳು ಬೈಕ್ ಕದ್ದು ಪರಾರಿಯಾಗುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗುರಪ್ಪನಪಾಳ್ಯದ ದೀಪಕ್ ಎಂಬುವವರ ಮನೆಯ ಮುಂಭಾಗ ಕಳೆದ ರಾತ್ರಿ 1ಗಂಟೆ ಸಮಯದಲ್ಲಿ ನಿಲ್ಲಿಸಿದ್ದ ಬೈಕ್‌ನ ಲಾಕ್ ಮುರಿದು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ದೀಪಕ್ ಸದ್ದಗುಂಟೆ ಪಾಳ್ಯ ಪೊಲೀಸರಿಗೆ ದೂರು ದಾಖಲಿಸಿದ್ದು ತನಿಖೆ ಕೈಗೊಂಡ ಪೊಲೀಸರಿಗೆ ಸಿಸಿಟಿ ಕ್ಯಾಮೆರಾದಲ್ಲಿ ಕಳ್ಳನ ದೃಶ್ಯ ಸಿಕ್ಕಿದ್ದು ಅದನ್ನು ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬೆಳಗ್ಗೆಯಿಂದ ಸಂಜೆವರೆಗೆ ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ತಿರುಗಾಡುತ್ತಾ ಕಳವಿಗೆ ಸಂಚು ರೂಪಿಸಿ ಮಧ್ಯರಾತ್ರಿ ಕಳವು ಮಾಡಿ ಪರಾರಿಯಾಗಿ ರುವುದು ಕಂಡುಬಂದಿದ್ದು ಅವರಿಗಾಗಿ ತೀವ್ರ ಶೋಧ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News