ಸಿಡ್ನಿ ಟೆಸ್ಟ್‌ನಲ್ಲೂ ಅಶ್ವಿನ್ ಆಡುವುದು ಅನುಮಾನ

Update: 2019-01-02 06:10 GMT

ಸಿಡ್ನಿ, ಜ.2: ಭಾರತದ ಅಗ್ರಮಾನ್ಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯ ವಿರುದ್ಧ್ದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಆರಂಭವಾಗಲಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

‘ಸ್ಪಿನ್ನರ್‌ಗಳ ಸ್ವರ್ಗ’ ಎನಿಸಿಕೊಂಡಿರುವ ಸಿಡ್ನಿ ಪಿಚ್‌ನಲ್ಲಿ ಅಶ್ವಿನ್ ಆಡುವ ನಿರೀಕ್ಷೆಯಿತ್ತು. ಆದರೆ, ಅವರು ಮೊದಲ ಟೆಸ್ಟ್ ವೇಳೆ ಕಾಣಿಸಿಕೊಂಡ ಹೊಟ್ಟೆನೋವಿನಿಂದ ಸರಿಯಾದ ಸಮಯಕ್ಕೆ ಚೇತರಿಸಿಕೊಂಡಿಲ್ಲ. ಅವರು ಮಂಗಳವಾರ ನೆಟ್ ಅಭ್ಯಾಸ ನಡೆಸಿದ್ದಾರೆ. 13 ಸದಸ್ಯರನ್ನು ಒಳಗೊಂಡ ಭಾರತ ತಂಡದಲ್ಲಿ ಅಶ್ವಿನ್‌ರನ್ನು ಸೇರಿಸಿಕೊಳ್ಳಲಾಗಿದೆ. ಆದರೆ ಅವರನ್ನು ಅಂತಿಮ-11ರ ಬಳಗದಲ್ಲಿ ಸೇರಿಸಿಕೊಳ್ಳುವ ಕುರಿತು ಗುರುವಾರ ಬೆಳಗ್ಗೆ ನಿರ್ಧರಿಸಲು ಭಾರತದ ಚಿಂತಕರ-ಚಾವಡಿ ನಿರ್ಧರಿಸಿದೆ.

ಎಡಗೈ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಾಲ್ಕನೇ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆಯಿದೆ. ಭಾರತ ಮೂರನೇ ಟೆಸ್ಟ್‌ನಲ್ಲಿ ಆಡಿದ್ದ ತಂಡದಿಂದ ಒಂದು ಬದಲಾವಣೆ ಮಾಡಬಹುದು. ಮಧ್ಯಮ ಸರದಿ ದಾಂಡಿಗ ವೈಯಕ್ತಿಕ ಕಾರಣದಿಂದ ಮುಂಬೈಗೆ ವಾಪಸಾಗಿರುವ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನವನ್ನು ತುಂಬಿಸಬೇಕಾಗಿದೆ.

 ನಾಲ್ಕನೇ ಟೆಸ್ಟ್‌ಗೆ ಭಾರತದ 13 ಸದಸ್ಯರ ತಂಡ: ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ(ಉಪನಾಯಕ), ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜ, ಕುಲ್‌ದೀಪ್ ಯಾದವ್, ರವಿಚಂದ್ರನ್ ಅಶ್ವಿನ್, ಮುಹಮ್ಮದ್ ಶಮಿ, ಜಸ್‌ಪ್ರಿತ್ ಬುಮ್ರಾ, ಉಮೇಶ್ ಯಾದವ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News