×
Ad

‘ವೇದಿಕೆ ನಮ್ಮದು ಪ್ರತಿಭೆ ನಿಮ್ಮದು’ ರಿಯಲ್ ಶೋ

Update: 2019-01-03 22:56 IST

ಬೆಂಗಳೂರು, ಜ.3: ಪ್ರತಿಭೆಯಿದ್ದರೂ ಸರಿಯಾದ ವೇದಿಕೆ ಸಿಗದೆ, ಬೆಳಕಿಗೆ ಬಾರದೇ ಮರೆಯಾಗುವ ಮಕ್ಕಳಿಗಾಗಿ ಜಸ್ಟ್ ಇವೆಂಟ್ ಸಂಸ್ಥೆ ‘ವೇದಿಕೆ ನಮ್ಮದು ಪ್ರತಿಭೆ ನಿಮ್ಮದು’ ಎಂಬ ವಿನೂತನ ರಿಯಲ್ ಶೋವನ್ನು ಆಯೋಜಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಪೂಜಾ ಸಿದ್ದಾರ್ಥ್‌ರಾವ್, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರ ಪ್ರತಿಭೆಗೆ ಉತ್ತಮ ವೇದಿಕೆಯನ್ನು ಕಲ್ಪಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಪ್ರತಿಭೆಯನ್ನು ಪರಿಚಯಿಸುವುದೇ ಈ ಶೋನ ಮುಖ್ಯ ಉದ್ದೇಶವಾಗಿದ್ದು, ಹೀಗಾಗಿ, ಖಾಸಗಿ ಹಾಗೂ ಸರಕಾರಿ ಶಾಲೆಗಳು ಎಂಬ ಭೇದ ಭಾವವಿಲ್ಲದೆ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಸ್ಪರ್ಧೆಯು ನೃತ್ಯ ಹಾಗೂ ಸಂಗೀತ ಹೀಗೆ ವಿವಿಧ ರೀತಿಯಲ್ಲಿ ನಡೆಸಲಾಗುತ್ತಿದೆ. ಶೋನಲ್ಲಿ ಭಾಗವಹಿಸಲು ಬಯಸುವ ಮಕ್ಕಳು ಅಥವಾ ತಮ್ಮ ಶಾಲೆಯಲ್ಲಿರುವ ಮಕ್ಕಳ ಪ್ರತಿಭೆಗಳಿಗೆ ಉತ್ತಮ ಅವಕಾಶ ಒದಗಿಸಿಕೊಡಲು ಇಚ್ಛಿಸುವವರು ಜ.10ರೊಳಗೆ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 99167 48859 ಅನ್ನು ಸಂಪರ್ಕಿಸಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News