ವೇಶ್ಯಾವಾಟಿಕೆ ದಂಧೆ: ಮಹಿಳೆಯ ಬಂಧನ

Update: 2019-01-04 13:14 GMT

ಬೆಂಗಳೂರು, ಜ.4: ಸ್ಪಾ ಹೆಸರಿನಲ್ಲಿ ಮಸಾಜ್ ಪಾರ್ಲರ್ ತೆರೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ಮಹಿಳೆಯೊಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ನಾಗಾಲ್ಯಾಂಡ್ ರಾಜ್ಯದ ಕ್ಯಾಟಿ ರೂಡಿ(29) ಬಂಧಿತ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಯನಗರದ 9ನೆ ಬ್ಲಾಕ್‌ನಲ್ಲಿ ಮಸಾಜ್ ಪಾರ್ಲರ್ ನಲ್ಲಿ ಕಾನೂನು ಬಾಹಿರವಾಗಿ ಲೈಂಗಿಕ ಚಟುವಟಿಕೆ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವೇಶ್ಯಾವಾಟಿಕೆಗೆ ತೊಡಗಿಸಿದ್ದ ಮೂವರು ಹುಡುಗಿಯರನ್ನು ಸಂರಕ್ಷಣೆ ಮಾಡಲಾಗಿದ್ದು, ಆರೋಪಿಯಿಂದ 3 ಸಾವಿರ ನಗದು, 1 ಮೊಬೈಲ್ ವಶಕ್ಕೆ ಪಡೆದು, ಇಲ್ಲಿನ ತಿಲಕನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News