ತಾಪಂ, ಗ್ರಾಪಂ ಸದಸ್ಯ ಸ್ಥಾನಗಳ ಚುನಾವಣಾ ಫಲಿತಾಂಶ ಪ್ರಕಟ
ಬೆಂಗಳೂರು, ಜ.4: ವಿವಿಧ ಕಾರಣಗಳಿಂದ ತೆರವಾಗಿದ್ದ ತಾಲೂಕು ಮತ್ತು ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಗಳಿಗೆ ಜ.2ರಂದು ಚುನಾವಣೆ ನಡೆದಿದ್ದು, ಶುಕ್ರವಾರ ಚುನಾವಣಾ ಅಧಿಕಾರಿಗಳು ಫಲಿತಾಂಶವನ್ನು ಪ್ರಕಟಿಸಿದ್ದಾರೆ.
ತಾಪಂ ಚುನಾವಣೆ: ಹರಪನಹಳ್ಳಿ ತಾಲೂಕಿನ ಹಲುವಾಗಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಸಿಂದಗಿ ತಾಲೂಕಿನ ಮಲಘಾಣದಲ್ಲಿ ಜೆಡಿಎಸ್, ಹಡಗಲಿ ತಾಲೂಕಿನ ಮೈಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಗ್ರಾಪಂ ಚುನಾವಣೆ: ನಾಗಮಂಗಲದಲ್ಲಿ ಖಾಲಿಯಿದ್ದ 7 ಸೀಟುಗಳ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ಪ್ರಕಟಿಸಿದ್ದಾರೆ. ಭಕ್ತರಹಳ್ಳಿ-10, ಮಳಮಾಚನಹಳ್ಳಿ-14, ಹೊಸಪೇಟೆ-17, ಬೈಂದೂರು-21, ಯಡ್ತರೆ-25, ಗಂಗೊಳ್ಳಿ-33, ರುಮ್ಮನಗೂಡ-10 ಸೀಟುಗಳಿಗೆ ಚುನಾವಣೆ ನಡೆದಿದ್ದು, ಎಲ್ಲ ಸೀಟುಗಳ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ಶುಕ್ರವಾರ ಪ್ರಕಟಿಸಿದ್ದಾರೆ. ಬೆಂಗಳೂರು ನಗರ ಸೇರಿ ಒಟ್ಟು 29 ಜಿಲ್ಲೆಗಳು, ಒಟ್ಟು ಗ್ರಾಪಂ 238, ಒಟ್ಟು ಸ್ಥಾನಗಳು 328, ನಾಮಪತ್ರ ಬಾರದೇ ಇರುವ ಸ್ಥಾನಗಳ ಸಂಖ್ಯೆ 87, ಫಲಿತಾಂಶ ಘೋಷಿಸಲಾದ ಸ್ಥಾನಗಳ ಸಂಖ್ಯೆ 241 ಎಂದು ಚುನಾವಣಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.