‘ಭಾರತ್ ಬಂದ್’ ರಾಜಕೀಯ ಪ್ರೇರಿತ: ಬಿಜೆಪಿ
Update: 2019-01-07 20:34 IST
ಬೆಂಗಳೂರು, ಜ.7: ಎಡಪಕ್ಷಗಳು ಮತ್ತು ಇತರೆ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ‘ಭಾರತ್ ಬಂದ್’ ಕೇವಲ ರಾಜಕೀಯ ಪ್ರೇರಿತ. ಅಲ್ಲದೆ, ಕಾರ್ಮಿಕರನ್ನು ದಾರಿ ತಪ್ಪಿಸುವ ದುರುದ್ದೇಶದಿಂದ ಕೂಡಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.
ನಿರುದ್ಯೋಗ, ಬೆಲೆ ಏರಿಕೆ, ಕೇಂದ್ರ ಸರಕಾರದ ಆರ್ಥಿಕ ನೀತಿಯನ್ನು ವಿರೋಧಿಸಿ ಭಾರತ್ ಬಂದ್ ಕರೆ ನೀಡಿರುವುದು ಅರ್ಥಹೀನ. ವಾಸ್ತವಿಕತೆಯಿಂದ ದೂರವಿದೆ. ತಪ್ಪು ಮಾಹಿತಿಯನ್ನು ನೀಡಿ ಬಂದ್ ಕರೆ ನೀಡಿರುವುದು ಸಮರ್ಥನೀಯವಲ್ಲ. ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಕಾರಣಕ್ಕಾಗಿ ಬಂದ್ ಕರೆ ನೀಡಲಾಗಿದೆ ಎಂದು ಅವರು ದೂರಿದ್ದಾರೆ.