ಬಿಜೆಪಿ ಉಪ್ಪಾರ ಸಮಾಜವನ್ನು ತುಳಿಯುತ್ತಿದೆ: ಆರೋಪ

Update: 2019-01-07 15:16 GMT

ಬೆಂಗಳೂರು, ಜ.7: ಪುಟ್ಟರಂಗ ಶೆಟ್ಟಿ ಅವರ ರಾಜೀನಾಮೆ ಕೇಳುವ ಮೂಲಕ ಬಿಜೆಪಿ ಉಪ್ಪಾರ ಸಮಾಜವನ್ನು ತುಳಿಯುವ ಪ್ರಯತ್ನಕ್ಕೆ ಮುಂದಾಗಿದೆ ಉಪ್ಪಾರ ಸಮುದಾಯ ತೀವ್ರವಾಗಿ ಆರೋಪಿಸಿದೆ.

ಸೋಮವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ್ಪಾರ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್.ಶಿವಕುಮಾರ್, ಬಿಜೆಪಿ ಪುಟ್ಟರಂಗ ಶೆಟ್ಟಿ ಅವರ ರಾಜೀನಾಮೆ ಕೇಳುವ ಮೂಲಕ ಸಮಾಜವನ್ನು ತುಳಿಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹಿಂದುಳಿದ ಸಮಾಜವಾದ ಉಪ್ಪಾರ ಸಮಾಜಕ್ಕೆ ಸೇರಿದ ಇವರ ಹಿಂದೆ ಪ್ರಭಾವಿಗಳು ಇಲ್ಲವೆಂದು ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜನವರಿ 4 ರಂದು ವಿಧಾನ ಸೌಧ ವೆಸ್ಟ್ ಗೇಟ್ ಬಳಿ ಮೋಹನ್ ಎಂಬುವರ ಬಳಿ ಇದ್ದ 25 ಲಕ್ಷಕ್ಕೂ ಹೆಚ್ಚು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವ್ಯಕ್ತಿಯು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯ ಟೈಪಿಸ್ಟ್ ಎನ್ನುವ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರು ಸಚಿವ ಪುಟ್ಟರಂಗ ಶೆಟ್ಟಿ ಅವರ ರಾಜೀನಾಮೆ ಕೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಇದನ್ನು ರಾಜ್ಯ ಉಪ್ಪಾರ ಸಮಾಜವು ತೀವ್ರವಾಗಿ ಖಂಡಿಸುತ್ತದೆ. ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ವಿಧಾನಸೌಧದ ಒಳಭಾಗ ಮತ್ತು ಶಾಸಕರ ಭವನದಲ್ಲಿ ಏನೆಲ್ಲ ಅಕ್ರಮ ನಡೆದರೂ, ಅವರು ಅಧಿಕಾರಕ್ಕೋಸ್ಕರ ಮೂಕ ಪ್ರೇಕ್ಷಕರಾಗಿದ್ದರು. ಅಲ್ಲದೆ, ಪ್ರಬಲ ಜಾತಿಯವರೆಂದು ಏಕೆ ಮೌನವಹಿಸಿದ್ದರು ಎನ್ನುವುದನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News