×
Ad

ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ನೂತನ ಪದಾಧಿಕಾರಿಗಳ ಆಯ್ಕೆ

Update: 2019-01-07 22:36 IST

ಬೆಂಗಳೂರು,ಜ.7: ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಮಹಾಸಭೆಯು ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾಧ್ಯಕ್ಷ ತಾಜುದ್ದೀನ್ ಫಾಳಿಲಿಯ ಅಧ್ಯಕ್ಷತೆಯಲ್ಲಿ ಹಲಸೂರ್ ಮರ್ಕ್ಹಿನ್ಸ್ ಆಡಿಟೋರಿಯಂನಲ್ಲಿ ನಡೆಯಿತು.

SJM ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯ ಎಸ್ಸೆಸ್ಸೆಫ್ ಕಾರ್ಯದರ್ಶಿ ಹಾಫಿಲ್ ಸುಫ್ಯಾನ್ ಸಖಾಫಿ ತರಗತಿ ನಡೆಸಿದರು. ನಂತರ ಮುಹಮ್ಮದ್ ಅನ್ವರ್ ಉಸ್ತಾದ್ ಜನರಲ್ ವರದಿ, ಶಬೀಬ್ ಕ್ಯಾಂಪಸ್ ವರದಿ ಹಾಗೂ ಅಬ್ದುಲ್ಲಾ ಎನ್.ಸಿರವರು ಆರ್ಥಿಕ ವರದಿಯನ್ನು ವಾಚಿಸಿದರು.

ಬಳಿಕ 2019-21 ನೇ ಸಾಲಿನ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಹಬೀಬಲ್ಲಾಹ್ ನೂರಾನಿ ಆಯ್ಕೆಯಾದರು. ಜನರಲ್ ಕಾರ್ಯದರ್ಶಿಯಾಗಿ ಮುಹಮ್ಮದ್ ಶಿಹಾಬುದ್ದೀನ್, ಫೈನಾನ್ಸ್ ಕಾರ್ಯದರ್ಶಿಯಾಗಗಿ ಶಾಫಿ ಸಅದಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಆಖ್ತರ್ ಹುಸೈನ್
ಹಾಗೂ ಉಪಾಧ್ಯಕ್ಷರಾಗಿ ಅನ್ವರ್ ಉಸ್ತಾದ್, ಎಪಿ ನುಫೇಲ್, ಅಬ್ದುಲ್ ಹಕೀಮ್, ಅಬ್ದುಲ್ಲಾಹ್ ಎನ್.ಸಿ  ಆಯ್ಕೆಯಾದರು. ಶಬೀಬ್ ಎಬಿ, ಶಂಸುದ್ದೀನ್ ಅಝ್ಹರಿ, ಅಬ್ದುರ್ರಜಾಕ್ ಕೆ, ಮುಹಮ್ಮದ್ ನಬಿ ಜೊತೆ ಕಾರ್ಯದರ್ಶಿಗಳಾಗಿ ನೇಮಕಗೊಂಡರು.

ಕಾರ್ಯಕ್ರಮದಲ್ಲಿ ಎಸ್.ವೈ.ಸ್ ಜಿಲ್ಲಾ ಕಾರ್ಯದರ್ಶಿ ಮುಜೀಬ್ ಸಖಾಫಿ , SMA ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ, ಅಬ್ದುಲ್ ರವೂಫ್ ಮುಂತಾದವರು ಇದ್ದರು.

ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಮೆoಬರ್ ಶಿಫ್ ಹೊಂದಿದ ಡಿವಿಷನ್ ಹಾಗೂ ಯೂನಿಟ್ ಗೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಗೌರವ ಪ್ರಶಸ್ತಿ ಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಕಾರ್ಯದರ್ಶಿ ಮುನೀರ್ ಈರ್ ಪೋಲ ಸ್ವಾಗತಿಸಿದರು. ಶಾಫಿ ಸಅದಿ ಅವರು ಧನ್ಯವಾದ ಅರ್ಪಿಸಿದರು. ರಾಜ್ಯ ಫೈನಾನ್ಸ್ ಕಾರ್ಯದರ್ಶಿ ಶರೀಫ್ ಮಾಸ್ಟರ್ ಕೌನ್ಸಿಲ್ ಕಾರ್ಯಕ್ರಮವನ್ನು ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News