ಹವಾಮಾನ ವೈಪರೀತ್ಯ ಹಿನ್ನೆಲೆ: ವಿಮಾನ ಬೇರೆಡೆಗೆ ಸ್ಥಳಾಂತರ

Update: 2019-01-07 17:10 GMT

ಬೆಂಗಳೂರು, ಜ.7: ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಲ್ಯಾಂಡ್ ಆಗಬೇಕಿದ್ದ ಒಂದು ವಿಮಾನ ಬೇರೆಡೆ ಸ್ಥಳಾಂತರವಾಗಿದೆ.

ನಗರದಲ್ಲಿ ದಿನದಿಂದ ದಿನಕ್ಕೆ ವಾತಾವರಣ ಬದಲಾಗುತ್ತಿದ್ದು, ಹವಾಮಾನ ವೈಪರೀತ್ಯ ಹಿನ್ನೆಲೆ ವಿಮಾನಗಳ ಹಾರಾಟದಲ್ಲಿ ಸೋಮವಾರ ವ್ಯತ್ಯಯವಾಗಿದೆ. ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇವನಹಳ್ಳಿ ಸುತ್ತಲಿನ ಪ್ರದೇಶದ ತಾಪಮಾನ 12 ಡಿಗ್ರಿಗೆ ತಲುಪಿದ್ದು, ಮಲೆನಾಡನ್ನು ಮೀರಿಸುವಂತ ವಾತಾವರಣ ಸೃಷ್ಟಿಯಾಗಿದೆ. 4 ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದ್ದು, 20 ವಿಮಾನಗಳು ವಿಳಂಬವಾಗಿ ಆಗಮನವಾಗಿವೆ.

ಒಟ್ಟಾರೆ ಕಳೆದ 20 ದಿನಗಳಿಂದ ದೇವನಹಳ್ಳಿ ಸುತ್ತಲಿನ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ವಿಮಾನಗಳ ಹಾರಾಟ ಮತ್ತು ವಾಹನ ಸವಾರರಿಗೆ ತೊಂದರೆಯಾಗಿದೆ. ಇನ್ನು ರಸ್ತೆಯಲ್ಲಿ ಎದುರಿನ ವಾಹನ ಕಾಣಿಸದಷ್ಟು ಮುಂಜಾನೆ ಮಂಜು ಆವರಿಸಿದ್ದು, ವಾಹನಗಳು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ವಾರಪೂರ್ತಿ ಚಳಿ: ಉತ್ತರ ಭಾರತದಲ್ಲಿ ಶೀತಗಾಳಿ ಬೀಸುತ್ತಿರುವ ಹಿನ್ನೆಲೆ ಬೆಂಗಳೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಿದೆ. ನಗರದಲ್ಲಿ ಕಡಿಮೆ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗಿದ್ದು, ವಾತಾವರಣದಲ್ಲಿ ವೈಪರೀತ್ಯವಾಗಿದೆ. ಇನ್ನು ಒಂದು ವಾರದವರಗೆ ಚಳಿ ಮುಂದುವರಿಯಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News