×
Ad

ಎಲ್ಲರೂ ಮಾತನಾಡುವುದು ಸರಿ ಅಲ್ಲ, ರೇವಣ್ಣ ಸೂಪರ್ ಸಿಎಂ ಅಲ್ಲ: ಎಚ್.ಎಂ.ರೇವಣ್ಣ

Update: 2019-01-08 18:45 IST

ಬೆಂಗಳೂರು, ಜ.8: ಕಳೆದ ಹದಿನೈದು ದಿನಗಳಿಂದ ಜನತಾದಳದ ಎಲ್ಲರೂ ಮಾತನಾಡಲು ಶುರುವಿಟ್ಟುಕೊಂಡಿದ್ದಾರೆ. ಅಲ್ಲದೆ, ಎಚ್.ಡಿ.ರೇವಣ್ಣ ಸೂಪರ್ ಸಿಎಂ ಅಲ್ಲ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಕಳೆದ ಹದಿನೈದು ದಿನಗಳಿಂದ ಜನತಾದಳದ ಎಲ್ಲರೂ ಮಾತನಾಡಲು ಶುರುವಿಟ್ಟುಕೊಂಡಿದ್ದಾರೆ. ಅಲ್ಲದೆ, ಎಚ್.ಡಿ.ರೇವಣ್ಣ ಸೂಪರ್ ಸಿಎಂ ಅಲ್ಲ. ಅವರು ಅರಿತು ಮಾತನಾಡಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ನವರು ಒತ್ತಡ ಹಾಕಿದರೆ ನಮ್ಮ ದಾರಿ ನಮಗೆ ಎಂದಿದ್ದ ಎಚ್.ಡಿ. ರೇವಣ್ಣ ಹೇಳಿಕೆಗೆ ತಿರುಗೇಟು ನೀಡಿದರು.

ನಮ್ಮಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿವೆ. ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರೊಂದಿಗೆ ಚರ್ಚಿಸಿ ಸರಿಪಡಿಸಿ ಕೊಳ್ಳುತ್ತೇವೆ. ಇಬ್ಬರೂ ಚರ್ಚೆ ಮಾಡಿಯೇ ನಿಗಮ ಮಂಡಳಿಯನ್ನು ನೇಮಕ ಮಾಡಲಾಗಿದೆ. ರಾಹುಲ್ ಗಾಂಧಿ ಅವರ ತೀರ್ಮಾನದಂತೆ ಪಟ್ಟಿ ಕೊಟ್ಟಿದ್ದೆವು. ಅದಕ್ಕೆ ಸಮ್ಮತಿ ಕೊಡಬೇಕಾಗಿದ್ದು ಮೈತ್ರಿ ಧರ್ಮ ಎಂದು ಎಚ್.ಎಂ.ರೇವಣ್ಣ ಅವರು ತಿಳಿಸಿದರು.

ಕಾಂಗೆಸ್‌ನಲ್ಲಿ ಹೈಕಮಾಂಡ್ ಸಂಸ್ಕೃತಿ ಇರುವುದರಿಂದ ಅವರ ನಿರ್ದೇಶನದಂತೆ ಕೋಮುವಾದಿ ಬಿಜೆಪಿ ಪಕ್ಷವನ್ನು ದೂರ ಇಡುವುದಕ್ಕಾಗಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಮತ್ತೊಮ್ಮೆ ಮೈತ್ರಿ ಧರ್ಮ ಕುರಿತು ಪ್ರಸ್ತಾಪಿಸಿದರು.

ಹಾಲುಮತ ಸಂಸ್ಕೃತಿ ವೈಭವ: ಗುಲ್ಬರ್ಗಾ ಭಾಗ-ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ವತಿಯಿಂದ ‘ಹಾಲುಮತ ಸಂಸ್ಕೃತಿ ವೈಭವ’ ಕಾರ್ಯಕ್ರಮವನ್ನು ಜ.12ರಿಂದ 14 ರವರೆಗೆ ರಾಯಚೂರಿನ ತಿಂಥಣಿ ಮಹಾಸಂಸ್ಥಾನದಲ್ಲಿ ಆಯೋಜಿಸಲಾಗಿದೆ. ಸಮಾವೇಶವನ್ನು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಲಿದ್ದು, ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಸಚಿವರಾದ ಶಿವಳ್ಳಿ, ಪುಟ್ಟರಂಗಶೆಟ್ಟಿ, ಪರಮೇಶ್ವರ ನಾಯ್ಕ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News