ಆಸ್ಟ್ರೇಲಿಯ ಬಾಲಕನಿಗೆ ಸ್ಫೂರ್ತಿಯಾದ ಭಾರತದ ಬೌಲರ್ ಯಾರು ಗೊತ್ತೇ?

Update: 2019-01-09 12:29 GMT

ಮೆಲ್ಬೋರ್ನ್, ಜ.9: ಭಾರತ ತಂಡ ಆಸ್ಟ್ರೇಲಿಯದಲ್ಲಿ ಮೊತ್ತ ಮೊದಲ ಬಾರಿ ಟೆಸ್ಟ್ ಕ್ರಿಕೆಟ್ ಸರಣಿ ಜಯಿಸಲು ಮಹತ್ವದ ಕೊಡುಗೆ ನೀಡಿದ್ದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅವರ ಬೌಲಿಂಗ್ ಆಸೀಸ್‌ನ ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೂ ಸ್ಫೂರ್ತಿಯಾಗಿದೆ.

ಆಸ್ಟ್ರೇಲಿಯದ ಬಾಲಕನೊಬ್ಬ 25ರ ಹರೆಯದ ಬುಮ್ರಾ ಅವರ ಶೈಲಿಯಲ್ಲಿ ಬೌಲಿಂಗ್ ಮಾಡಲು ಯತ್ನಿಸುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಬಾಲಕ ತನ್ನ ಶೈಲಿಯ ಬೌಲಿಂಗ್ ಮಾಡಲು ಯತ್ನಿಸುವ ವಿಡಿಯೋವನ್ನು ಹಾಕಿ ಮರು ಟ್ವೀಟ್ ಮಾಡಿರುವ ಬುಮ್ರಾ, ‘‘ಈ ಬಾಲಕ ತುಂಬಾ ಮುದ್ದಾಗಿದ್ದಾನೆ. ಆತನಿಗೆ ನನ್ನ ಶುಭ ಹಾರೈಕೆಗಳು’’ ಎಂದಿದ್ದಾರೆ.

ಭಾರತದ ವಿಭಿನ್ನ ಶೈಲಿಯ ಬೌಲರ್ ಆಗಿರುವ ಬುಮ್ರಾ ಟೆಸ್ಟ್ ಸರಣಿಯಲ್ಲಿ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆಸೀಸ್ ಸ್ಪಿನ್ನರ್ ನಥಾನ್ ಲಿಯೊನ್‌ರೊಂದಿಗೆ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆಯನ್ನು ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News