ವಿಧಾನಸೌಧದ ಬಳಿ ನಗದು ಜಪ್ತಿ ಪ್ರಕರಣ: ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

Update: 2019-01-11 17:15 GMT

ಬೆಂಗಳೂರು, ಜ.11: ವಿಧಾನಸೌಧದ ಬಳಿ ನಗದು ಜಪ್ತಿ ಮಾಡಿದ ಪ್ರಕರಣ ಸಂಬಂಧ ಆರೋಪಿ ಅರೋಪಿ ಎಸ್.ಜೆ.ಮೋಹನ್ ಕುಮಾರ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಜ.4ರಂದು ವಿಧಾನಸೌಧದ ಪಶ್ಚಿಮ ದ್ವಾರದ ಸಮೀಪ ಆರೋಪಿ ಮೋಹನ್ ಬಳಿ 25.76 ಲಕ್ಷ ರೂ. ನಗದು ಅನ್ನು ವಿಧಾನಸೌಧ ಠಾಣಾ ಪೊಲೀಸರು ಜಪ್ತಿ ಮಾಡಿದ್ದರು. ತದನಂತರ, ಈ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರ್ಗಾಯಿಸಿ, ಆರೋಪಿ ಅನ್ನು ಬಂಧಿಸಲಾಗಿತ್ತು.

ಶುಕ್ರವಾರ ಆರೋಪಿ ಮೋಹನ್‌ನನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ವಾದ-ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಲಯದ 24ನೇ ಸೆಷನ್ಸ್ ನಾಯಾಧೀಶೆ ಮಂಜುಳಾ ಅವರು, ಆರೋಪಿ ಮೋಹನ್‌ಗೆ ಜ.24ರ ತನಕ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಅಲ್ಲದೇ, ಜಾಮೀನು ಅರ್ಜಿ ವಿಚಾರಣೆಯನ್ನು ಜ.14 ಕ್ಕೆ ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News