ಆಯೋಧ್ಯೆಯಲ್ಲಿ ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿದೆ: ಪ್ರಧಾನಿ ಮೋದಿ

Update: 2019-01-12 10:06 GMT

ಹೊಸದಿಲ್ಲಿ, ಜ.12: ಆಯೋಧ್ಯೆಯಲ್ಲಿ ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್  ರಾಜಕೀಯ ಮಾಡಿದೆ . ವಕೀಲರ ಮೂಲಕ ಹಿನ್ನಡೆಯನ್ನುಂಟು ಮಾಡಿದೆ, ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಮುಂದೂಡಲು ಮನವಿ ಮಾಡಿದೆ ಎಂದು ಪ್ರಧಾನ  ಮಂತ್ರಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ  

ರಾಮ್ ಲೀಲಾ ಮೈದಾನದಲ್ಲಿ ಶನಿವಾರ ಬಿಜೆಪಿ ರಾಷ್ಟ್ರೀಯ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು ಒಂದೊಮ್ಮೆ ಕೇವಲ ಇಬ್ಬರು ಸಂಸದರನ್ನು ಹೊಂದಿದ್ದ  ಬಿಜೆಪಿ ಪಕ್ಷ ಈ ಹೊತ್ತು ದೇಶದ ಆಡಳಿತದ ಚುಕ್ಕಾಣಿ ಹಿಡಿದಿದೆ. ಇವತ್ತು ಇಷ್ಟು ದೊಡ್ಡ ಕಾರ್ಯಕ್ರಮ ಮಾಡುತ್ತಿದೆ. ಕಾರ್ಯಕರ್ತರಿಂದಲೇ ಬಿಜೆಪಿ ದೊಡ್ಡ ಪಕ್ಷವಾಗಿ ಬೆಳೆದಿದೆ ಎಂದರು.

16 ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ಇದೆ . ದೇಶದ ಜನರಿಗೆ ಬಿಜೆಪಿಯಲ್ಲಿ ವಿಶ್ವಾಸವಿದೆ. ಹಿಂದಿನ ಸರಕಾರಗಳು ದೇಶವನ್ನು ಕತ್ತಲೆಯಲ್ಲಿಟ್ಟು.ಹಗರಣಗಳಲ್ಲಿ ಕಾಲಕಳೆದಿತ್ತು ಎಂದು ಅಭಿಪ್ರಾಯಪಟ್ಟರು.

ದೇಶದ ಪೈಸೆ-ಪೈಸೆ ಹಣವನ್ನು ಆಭಿವೃದ್ಧಿಗೆ ಬಳಸಲಾಗುತ್ತಿದೆ. ಗ್ಯಾಸ್ ಸಬ್ಸಿಡಿ ಬಿಡುವುದರ ಮೂಲಕ , ಜಿಎಸ್ ಟಿ, ತೆರಿಗೆ ಪಾವತಿಸುವ ಮೂಲಕ ಜನರು ದೇಶದ ಅಭಿವೃದ್ಧಿಗೆ ಕೈ ಜೋಡಿಸುತ್ತಿದ್ದಾರೆ. ತೆರಿಗೆ ವಿಚಾರದಲ್ಲಿ ಜನತೆಗೆ ವಿಶ್ವಾಸ ಮೂಡಿದೆ. ದೇಶದಲ್ಲಿ ಮಹತ್ವದ ಬದಲಾವಣೆಗೆ ಮುಂದಾದರೆ ಜನರು ಸಾಥ್ ನೀಡುತ್ತಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ಧ್ಯೇಯ ವಾಕ್ಯವಾಗಿದೆ ಎಂದರು.

ಕೇಂದ್ರ ಸರಕಾರ ಕೇವಲ ಅಭಿವೃದ್ಧಿಯ ಗುರಿಯನ್ನು ಹೊಂದಿದ್ದು, ಪ್ರಾಮಾಣಿಕತೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 

ದೇಶದಲ್ಲಿನ ಬಡತನವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಬಡತನ ನಿವಾರಣೆಗೆ ಹೊಸ ಹೊಸ ಯೋಜನೆಗಳನ್ನು ನಿರಂತರವಾಗಿ  ಜಾರಿಗೊಳಿಸಲಾಗುತ್ತಿದೆ.  ಕೇಂದ್ರದ ಬಿಜೆಪಿ ಸರಕಾರ ಹಿಂದಿನ ಯೋಜನೆಗಳ ಹೆಸರನ್ನು ಮಾತ್ರ ಬದಲಾಯಿಸಿದೆ ಎಂದು ವಿಪಕ್ಷಗಳು ಟೀಕಿಸುತ್ತದೆ. ಆದ್ರೆ ಎಷ್ಟು ಯೋಜನೆಗಳಿಗೆ ನನ್ನ ಹೆಸರು ಇದೆ.  ನರೇಂದ್ರ ಮೋದಿ ಹೆಸರಿನಲ್ಲಿ ಯಾವುದಾದರೂ ಯೋಜನೆ ಇದೆಯೋ ? ಎಂದು ಪ್ರಶ್ನಿಸಿದರು.

ಕೇಂದ್ರ ಸರಕಾರದ ಯೋಜನೆಗಳಿಗೆ ನನ್ನ ಹೆಸರಿಟ್ಟಿಲ್ಲ. ಹಿಂದಿನ ಸರಕಾರಗಳು ಅವರ ಪಕ್ಷದವರ ಹೆಸರಿಟ್ಟಿದೆ. ವಿಮಾನ ನಿಲ್ದಾಣಗಳಿಗೂ ಅವರ ಹೆಸರಿದೆ .ಇದೀಗ ಯಾವುದೇ ಯೋಜನೆಗೂ ನರೇಂದ್ರ ಮೋದಿ ಹೆಸರನ್ನು ಇಡಲಾಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News