ಮೊದಲ ಏಕದಿನ ಪಂದ್ಯ: ಭಾರತದ ವಿರುದ್ಧ ಆಸ್ಟ್ರೇಲಿಯಕ್ಕೆ ಜಯ

Update: 2019-01-12 11:38 GMT

ಸಿಡ್ನಿ, ಜ.12:ಇಲ್ಲಿ ನಡೆದ ಮೊದಲ ಏಕದಿನ  ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ 34 ರನ್ ಗಳ ಸೋಲು ಅನುಭವಿಸಿದೆ.

ಇದರೊಂದಿಗೆ ಆಸ್ಟ್ರೇಲಿಯ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ

ಗೆಲುವಿಗೆ 289 ರನ್ ಗಳ ಸವಾಲನ್ನು ಪಡೆದ ಭಾರತ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 254 ರನ್ ಗಳಿಸಿತು.

ಆರಂಭಿಕ ದಾಂಡಿಗ ರೋಹಿತ್ ಶರ್ಮಾ 133 ರನ್ (129ಎ, 10ಬೌ,6ಸಿ) ಮತ್ತು ಮಹೇಂದ್ರ ಸಿಂಗ್ ಧೋನಿ 51 ರನ್(96ಎ, 3ಬೌ,1ಸಿ) , ದಿನೇಶ್ ಕಾರ್ತಿಕ್ 12ರನ್ ಮತ್ತು ಭುವನೇಶ್ವರ್ ಕುಮಾರ್  ಔಟಾಗದೆ 29 ರನ್ ಗಳಿಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ.

ರೋಹಿತ್ ಶರ್ಮಾ 194ನೇ ಏಕದಿನ ಪಂದ್ಯದಲ್ಲಿ  22ನೇ ಏಕದಿನ ಶತಕ ದಾಖಲಿಸಿದರು. ಅವರು 110 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಲ್ಲಿ ಶತಕ ಪೂರೈಸಿದರು.

ಶಿಖರ್ ಧವನ್ (0) ಮತ್ತು ಅಂಬಟಿ ರಾಯುಡು (0) ಖಾತೆ ತೆರೆಯದೆ ನಿರ್ಗಮಿಸಿದರು. ನಾಯಕ ವಿರಾಟ್ ಕೊಹ್ಲಿ 3ರನ್, ರವೀಂದ್ರ ಜಡೇಜ 8ರನ್, ಕುಲ್ ದೀಪ್ ಯಾದವ್ 3 ರನ್, ಮುಹಮ್ಮದ್ ಶಮಿ 1ರನ್ ಗಳಿಸಿ ಔಟಾದರು.

ಆಸ್ಟ್ರೇಲಿಯದ ಜೆ. ರಿಚರ್ಡ್ಸನ್ 26ಕ್ಕೆ 4 ವಿಕೆಟ್, ಜಾಸನ್ ಬೆಹರ್ನ್ಡಾಫ್ ಮತ್ತು ಮಾರ್ಕೊಸ್ ಸ್ಟೋನಿಸ್ ತಲಾ 2 ವಿಕೆಟ್, ಪೀಟರ್ ಸಿಡ್ಲ್ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News