×
Ad

ಟ್ಯಾಕ್ಸಿಗಳಲ್ಲಿ ಚೈಲ್ಡ್ ಲಾಕ್ ನಿಷ್ಕ್ರಿಯಕ್ಕೆ ಜ.16ರ ಗಡುವು ನೀಡಿದ ಸಾರಿಗೆ ಇಲಾಖೆ

Update: 2019-01-12 21:44 IST

ಬೆಂಗಳೂರು, ಜ.12: ಎಲ್ಲ ಟ್ಯಾಕ್ಸಿಗಳಲ್ಲಿ ಚೈಲ್ಡ್ ಲಾಕ್ ಸಿಸ್ಟಮ್ ನಿಷ್ಕ್ರಿಯಗೊಳಿಸಲು ಸಾರಿಗೆ ಇಲಾಖೆಯು ಜ.16ರವರೆಗೆ ಗಡುವು ನೀಡಿದ್ದು, ಈ ಅವಧಿಯೊಳಗೆ ಚೈಲ್ಡ್ ಲಾಕ್ ತೆಗೆಸದ ವಾಹನಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಮಹಿಳಾ ಪ್ರಯಾಣಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ತಡೆಗಟ್ಟಲು ಟ್ಯಾಕ್ಸಿಗಳಲ್ಲಿನ ಚೈಲ್ಡ್ ಲಾಕ್ ನಿಷ್ಕ್ರಿಯಗೊಳಿಸಲು ಕ್ರಮ ಕೈಗೊಳ್ಳುವಂತೆ ಹೈಕೋಟ್ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯಿದೆ 1988ರ ಕಲಂ 2ರ ಅನ್ವಯ ಮೋಟಾರು ಕ್ಯಾಬ್‌ಗಳಾಗಿ (ಸಾರಿಗೆ ವಾಹನ) ನೋಂದಣಿಯಾಗಿರುವ ಎಲ್ಲ ವಾಹನಗಳಲ್ಲಿರುವ ಚೈಲ್ಡ್ ಲಾಕ್ ಸಿಸ್ಟಮ್ ನಿಷ್ಕ್ರಿಯಗೊಳಿಸಲು ಮತ್ತು ಚೈಲ್ಡ್ ಲಾಲ್ ವ್ಯವಸ್ಥೆಯುಳ್ಳ ವಾಹನಗಳಿಗೆ ರಹದಾರಿ ಪರವಾನಗಿ ನೀಡಬಾರದು ಎಂದು ರಾಜ್ಯ ಸರಕಾರವು ಸಾರಿಗೆ ಇಲಾಖೆಗೆ ಸೂಚಿಸಿದೆ. ಆ್ಯಪ್ ಆಧರಿತ ಟ್ಯಾಕ್ಸಿಗಳನ್ನು ಹೊಂದಿರುವ ಮಾಲಕರು ಶೀಘ್ರವಾಗಿ ದಾಖಲೆಗಳೊಂದಿಗೆ ನೋಂದಣಿ ಪ್ರಾಧಿಕಾರಿಗಳಲ್ಲಿ ವಾಹನವನ್ನು ಹಾಜರುಪಡಿಸಿ, ಚೈಲ್ಡ್ ಲಾಕ್ ನಿಷ್ಕ್ರಿಯಗೊಳಿಸಿರುವ ಕುರಿತು ದೃಢೀಕರಣ ಪಡೆಯಬೇಕು. ದೃಢೀಕರಣ ಪ್ರಮಾಣಪತ್ರ ಹೊಂದಿಲ್ಲದ ವಾಹನಗಳು ಮತ್ತು ಆ್ಯಪ್ ಆಧರಿತ ಟ್ಯಾಕ್ಸಿಗಳಿಗೆ ಸೇವೆ ಸಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಸಾರಿಗೆ ಇಲಾಖೆ ಆಯುಕ್ತರು ಪ್ರಕಟನೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News