ಕಿರಿಯ ಸ್ಕೂಬಾ ಡೈವ್ ಪ್ರಮಾಣ ಪತ್ರ ಪಡೆದ ಮಾಸ್ಟರ್ ಕೌಶಲ್

Update: 2019-01-12 16:35 GMT

ಬೆಂಗಳೂರು, ಜ.12: ನಗರದ ಹತ್ತು ವರ್ಷದ ಮಾಸ್ಟರ್ ಕೌಶಲ್ ಕಿರಣ್ ಕುಮಾರ್ ಗೋವಾದಲ್ಲಿನ ಗ್ರಾಂಡ್ ಐಲೆಂಡ್‌ನಲ್ಲಿ ಜಿಗಿತ ಹಾಗೂ ನೀರೊಳಗಿನ ಕೌಶಲ್ಯಗಳನ್ನು ಪ್ರದರ್ಶಿಸಿ ಭಾರತದ ಅತ್ಯಂತ ಕಿರಿಯ ಸ್ಕೂಬಾ ಡೈವ್ ಆಗಿ ಹೊರಹೊಮ್ಮಿದ್ದಾನೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತರಬೇತುದಾರ ಅರವಿಂದ್ ವೇಣು, ಮಾಸ್ಟರ್ ಕೌಶಲ್ ಕಿರಣ್ ಕುಮಾರ್‌ಗೆ ಸ್ಕೂಬಾ ಸ್ಕಾಲ್ ಇಂಟರ್ ನ್ಯಾಷನಲ್‌ನ ಡೈವ್ ಕಂಟ್ರೋಲ್ ಸ್ಪೆಷಲಿಸ್ಟ್ ವೆಂಕಟೇಶ್ ಚಾರ್ಲೋ ಆಫ್ ಎಂಎಸ್ ಬರ್ರಾಕುಡಾ ಡೈವಿಂಗ್ ಇಂಡಿಯಾ ವತಿಯಿಂದ ಪ್ರಮಾಣಪತ್ರ ನೀಡಿ ಗೌರವಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈಜಿಪ್ಟ್ ಮೂಲದ ನತಾಶಾ ಟರ್ನರ್, ಮುಂಬಯಿ ಮೂಲದ ತಮ್ಮನ್ನ ಬಾಲಾಚಂದರ್ ಹಾಗೂ ಪಾರ್ಥ್ ಸಾಂಗ್ವಿಯವರ ಹೆಸರಿನಲ್ಲಿದ್ದ ಸ್ಕೂಬಾ ಡೈವ್‌ನ ಹಿಂದಿನ ದಾಖಲೆಯನ್ನು ಕೌಶಲ್ ಮುರಿದಿದ್ದಾರೆ. ಅಲ್ಲದೆ, 8ನೇ ವಯಸ್ಸಿನಲ್ಲೇ ಈಜು ತರಬೇತಿಯನ್ನು ಪ್ರಾರಂಭಿಸಿ ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿ, ಬಸವೇಶ್ವರನಗರ, ಬೆಂಗೂರಿನ ತಂಡದಲ್ಲಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News