ಆರ್ಥಿಕ ಆಧಾರದ ಮೀಸಲಾತಿ ಸಾಂವಿಧಾನಿಕ ವಿರೋಧಿ: ಕ್ಯಾಂಪಸ್ ಫ್ರಂಟ್

Update: 2019-01-12 16:36 GMT

ಬೆಂಗಳೂರು, ಜ.12: ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಶೇ.10ರಷ್ಟು ಮೀಸಲಾತಿ ನೀಡಲು ಮುಂದಾಗಿರುವ ಮೋದಿ ಸರಕಾರದ ತೀರ್ಮಾನ ಸಾಂವಿಧಾನಿಕ ವಿರೋಧಿಯಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಅಂಚಿನಲ್ಲಿರುವ ಗುಂಪುಗಳು ಮತ್ತು ಸಂವಿಧಾನಾತ್ಮಕ ಧಾರ್ಮಿಕ ನಂಬಿಕೆ ಇರುವವರು ಈ ನಿರ್ಣಯವನ್ನು ಮತ್ತೆ ಒಗ್ಗೂಡಿಸಬೇಕು. ಅಲ್ಲದೆ, ಸಂವಿಧಾನದಲ್ಲಿ ಮೀಸಲಾತಿ ನೀಡುವ ಅವಕಾಶ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಹಾಗೂ ಅಲ್ಪ ಸಂಖ್ಯಾತರು ಹಾಗೂ ತುಳಿತಕ್ಕೊಳಗಾದ ಸಮುದಾಯಗಳ ಭಾಗವಹಿಸುವಿಕೆಯ ಶಕ್ತಿಯನ್ನು ಬಲಪಡಿಸಲು ಉದ್ದೇಶಿಸಬೇಕು ಎಂದು ಸಲಹೆ ಮಾಡಿದೆ.

ಸ್ವಾತಂತ್ರಗಳಿಸಿ 60 ವರ್ಷಗಳಾದರೂ ಸಾಮಾಜಿಕ ರಾಜಕೀಯ ಮತ್ತು ಶೈಕ್ಷಣಿಕ ಸ್ಥಿತಿಗತಿಗಳಲ್ಲಿ ಅಂಚಿನಲ್ಲಿರುವ ಗುಂಪುಗಳು ಹೆಚ್ಚು ದುರ್ಬಲರಾಗಿದ್ದಾರೆ. ಮುಂದೆ ಸಾಮಾಜಿಕ ಗುಂಪುಗಳು ರಾಷ್ಟ್ರೀಯ ಸಂಪನ್ಮೂಲಗಳನ್ನು ನಿರಂಕುಶವಾಗಿ ಹಿಡಿದಿವೆ. ಇದರ ಹೊರತಾಗಿಯೂ, 2019 ಸಾರ್ವತ್ರಿಕ ಚುನಾವಣೆಯಲ್ಲಿ ಮುಖ್ಯ ಜಾತಿ ಗುಂಪುಗಳನ್ನು ಸಮಾಧಾನಗೊಳಿಸುವ ಸರಕಾರದ ಇತ್ತೀಚಿನ ಕ್ರಮವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆರೋಪಿಸಿದೆ.

ಮೀಸಲಾತಿ ಹೆಸರಿನಲ್ಲಿ ಸಮಾಜವನ್ನು ಧ್ರುವೀಕರಿಸುವ ಮೂಲಕ ತಮ್ಮ ಆಡಳಿತಾತ್ಮಕ ವೈಫಲ್ಯವನ್ನು ಸರಿದೂಗಿಸಲು ಬಿಜೆಪಿ ಸರಕಾರವು ಯಾವುದೇ ಸಾಧನೆಯಿಲ್ಲದೆ. ಅಸಾಂವಿಧಾನಿಕ ಮಾರ್ಗದ ಮೂಲಕ ಆರ್ಥಿಕ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡಲು ಮುಂದಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News