ಮುಕ್ತ ಮನಸ್ಸಿನಿಂದ ಆಡುವ ಕಲೆ ರೂಢಿಸಿಕೊಳ್ಳುವೆ

Update: 2019-01-12 18:47 GMT

ಮೆಲ್ಬೋರ್ನ್, ಜ.12: ಪುರುಷರ ವಿಭಾಗದ ಟೆನಿಸ್ ಪಂದ್ಯಾವಳಿಯ ಭವಿಷ್ಯದ ಚಾಂಪಿಯನ್ ಆಟಗಾರ ಎನಿಸಿಕೊಳ್ಳುತ್ತಿರುವ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್, ಪ್ರಮುಖ ಟೂರ್ನಿಗಳಲ್ಲಿ ಆಡುವುದರಿಂದ ಅನುಭವಿಸುವ ಸಂತೋಷವು ತನ್ನ ಗ್ರಾನ್‌ಸ್ಲಾಮ್ ಯಶಸ್ಸಿಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ. ರೋಜರ್ ಫೆಡರರ್, ನೊವಾಕ್ ಜೊಕೊವಿಕ್‌ರಂತಹ ಮಹಾನ್ ಆಟ ಗಾರರಿಗೆ ಯಾವಾಗಲೂ ಸವಾಲಾಗುತ್ತಿರುವ 21 ವರ್ಷ ವಯಸ್ಸಿನ ಝ್ವೆರೆವ್, ಈವರೆಗೆ ಪ್ರಮುಖ ಗ್ರಾನ್‌ಸ್ಲಾಮ್‌ಗಳಲ್ಲಿ ಕೇವಲ ಕ್ವಾರ್ಟರ್‌ಫೈನಲ್‌ವರೆಗೆ ತಲುಪಿದ ಸಾಧನೆ ಮಾಡಿದ್ದಾರೆ.

ಮೆಲ್ಬೋರ್ನ್‌ನಂತಹ ನೀಲಿ ಹಾರ್ಡ್‌ಕೋಟ್‌ಗಳಲ್ಲಿ ಆಡುವ ಸಂದರ್ಭದಲ್ಲಿ ಆಟದ ವಿಧಾನವನ್ನು ಬದಲಿಸಬೇಕಾಗುತ್ತದೆ. 2018ರ ಅಂತ್ಯದಲ್ಲಿ ಎಟಿಪಿ ಚೊಚ್ಚಲ ಪ್ರಶಸ್ತಿ ಪಡೆದಾಗ ಆಡಿದ ರೀತಿಯಲ್ಲೇ ಮುಕ್ತ ಮನಸ್ಸಿನಿಂದ ಆಡಬೇಕಿದೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News