ನಾಕೌಟ್ ತಲುಪಿದ ಇರಾಕ್

Update: 2019-01-12 18:50 GMT

ಅಬುಧಾಬಿ, ಜ.12: ಯೆಮೆನ್ ತಂಡವನ್ನು 3-0 ಗೋಲುಗಳ ಅಂತರದಿಂದ ಸೋಲಿಸಿದ ಇರಾಕ್ ನಾಕೌಟ್ ಹಂತಕ್ಕೆ ಲಗ್ಗೆಯಿಟ್ಟಿದೆ.

ಶಾರ್ಜಾದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಇರಾಕ್ ಪರ ಮೊಹನದ್ ಅಲಿ (11ನೇ ನಿಮಿಷ), ಬಷರ್ ರಸನ್(19ನೇ ನಿಮಿಷ) ಹಾಗೂ ಅಲಾ ಅಬ್ಬಾಸ್ (90+ ನಿಮಿಷ) ಗೋಲು ಗಳಿಸಿ ಗೆಲುವಿಗೆ ಕಾರಣರಾದರು. ಬುಧವಾರ ನಡೆಯುವ ಪಂದ್ಯದಲ್ಲಿ ಇರಾನ್ ಹಾಗೂ ಇರಾಕ್ ಪರಸ್ಪರ ಎದುರಾಗಲಿದ್ದು, ‘ಡಿ’ ಗುಂಪಿನ ಅಗ್ರಸ್ಥಾನಿಯನ್ನು ನಿರ್ಧರಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News