ಆತ್ಮಹತ್ಯಾ ಬಾಂಬರ್ ವೃದ್ಧನನ್ನು ಸೆರೆಹಿಡಿದ ಸೇನೆ: ವೈರಲ್ ಆದ ಫೋಟೊ ಹಿಂದಿನ ಸತ್ಯ ಇಲ್ಲಿದೆ

Update: 2019-01-13 09:27 GMT

ಹೊಸದಿಲ್ಲಿ, ಜ.13: ಫೇಸ್‍ ಬುಕ್ ಬಳಕೆದಾರ ಸಂಜಯ್ ಚೌಧರಿ ಎಂಬಾತ ಇತ್ತೀಚೆಗೆ ಹಳದಿ ಚೀಲ ಹೊಂದಿದ್ದ ಒಬ್ಬ ವೃದ್ಧನ ಚಿತ್ರವನ್ನು ಪೋಸ್ಟ್ ಮಾಡಿ, ‘ಭಾರತೀಯ ಸೇನೆ ಸೆರೆಹಿಡಿದ ಆತ್ಮಹತ್ಯಾ ಬಾಂಬರ್ ಈತ’ ಎಂದು ಒಕ್ಕಣೆ ನೀಡಿದ್ದ. ಈ ಪೋಸ್ಟ್ 6300 ಶೇರ್ ಆಗಿದೆ.

ಟ್ವಿಟರ್‍ನಲ್ಲೂ ಇಂಥದ್ದೇ ಒಕ್ಕಣೆಯೊಂದಿಗೆ ಈ ಚಿತ್ರ ಹರಿದಾಡಿದೆ. ಇವುಗಳನ್ನು ಶೇರ್ ಮಾಡಿದ ಬಹಳಷ್ಟು ಮಂದಿ ರೈಲ್ವೆ ಸಚಿವ ಪಿಯೂಶ್ ಗೋಯಲ್ ಫಾಲೋ ಮಾಡುವವರು. ಇದೇ ಚಿತ್ರವನ್ನು ಕಳೆದ ವರ್ಷವೂ ಶೇರ್ ಮಾಡಿರುವುದನ್ನು ಆಲ್ಟ್ ನ್ಯೂಸ್ ಪತ್ತೆ ಮಾಡಿದೆ. ಸೆಮಹ್ ಜಿ.ವೈಫರ್ ಫ್ಯಾನ್ಸ್ ಎಂಬ ಪೇಜ್‍ನಿಂದ ಇದನ್ನು ಪೋಸ್ಟ್ ಮಾಡಲಾಗಿದ್ದು, 59 ಸಾವಿರ ಬಾರಿ ಇದು ಶೇರ್ ಆಗಿದೆ. ಈ ಬಾರಿಯೂ ಇಂಥದ್ದೇ ಒಕ್ಕಣೆ ನೀಡಿ, ಈ ವೃದ್ಧನನ್ನು ಉಗ್ರಗಾಮಿ ಎಂದು ಬಿಂಬಿಸಲಾಗಿದೆ.

ಸತ್ಯವೇನು?

ಗೂಗಲ್‍ನಲ್ಲಿ ಈ ಚಿತ್ರವನ್ನು ರಿವರ್ಸ್ ಸರ್ಚ್ ಮಾಡಿದಾಗ, ಸಿಸಾತ್ ಪಿಕೆ ಎಂಬ ಖಾತೆಯಿಂದ ಇದು 2014ರಲ್ಲಿ ಟ್ವೀಟ್ ಆಗಿರುವುದು ಕಂಡುಬಂತು. ಆಗ ಹಶೀಶ್ ಜಾಕೆಟ್‍ ನೊಂದಿಗೆ ತುರ್ಕಂ ಗಡಿಯಲ್ಲಿ ಇರುವ ವ್ಯಕ್ತಿ ಎಂಬ ಶೀರ್ಷಿಕೆ ನೀಡಲಾಗಿತ್ತು.

ಅದೇ ವರ್ಷ ಪಾಕಿಸ್ತಾನಿ ಮೂಲದ ಪತ್ರಕರ್ತರೊಬ್ಬರು ಇದೇ ಚಿತ್ರ ಟ್ವೀಟ್ ಮಾಡಿ, ಪಾಕಿಸ್ತಾನ- ಅಪ್ಘಾನಿಸ್ತಾನ ಗಡಿಯಲ್ಲಿ ಹಶೀಶ್ ದಿಗೆ ಈತನನ್ನು ಬಂಧಿಸಲಾಗಿದೆ ಎಂದು ಹೇಳಿದ್ದರು.

2014ರಲ್ಲಿ ಇದನ್ನು ಶೇರ್ ಮಾಡಿ ಐಸಿಸ್ ಉಗ್ರ ಎಂದು ಈತನನ್ನು ಬಿಂಬಿಸಲಾಗಿತ್ತು. ಆದರೆ ಇದನ್ನು ಮಲೇಷ್ಯನ್ ವೆಬ್‍ಸೈಟ್ ಅಲ್ಲಗಳೆದು ಸುಳ್ಳು ಬಯಲುಗೊಳಿಸಿತ್ತು.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News