7ನೇ ವೇತನ ಆಯೋಗದ ಶಿಫಾರಸಿಗೆ ಅನುಮೋದನೆ

Update: 2019-01-15 17:20 GMT

ಹೊಸದಿಲ್ಲಿ, ಜ. 15: ದೇಶದ ರಾಜ್ಯ ಸರಕಾರ/ಸರಕಾರಿ ಅನುದಾನಿತ ಪದವಿ ಮಟ್ಟದ ತಾಂತ್ರಿಕ ಸಂಸ್ಥೆಗಳ ಅಧ್ಯಾಪಕರು ಹಾಗೂ ಇತರ ಶೈಕ್ಷಣಿಕ ಸಿಬ್ಬಂದಿಗೆ ಸೌಲಭ್ಯ ನೀಡಲು 7ನೇ ಕೇಂದ್ರ ವೇತನಾ ಆಯೋಗವನ್ನು ವಿಸ್ತರಿಸುವ ಪ್ರಸ್ತಾಪಕ್ಕೆ ಮೋದಿ ಸರಕಾರ ಮಂಗಳವಾರ ಅನುಮೋದನೆ ನೀಡಿದೆ.

ಇದರಿಂದ ಕೇಂದ್ರ ಸರಕಾರ ಬೊಕ್ಕಸಕ್ಕೆ 1241.78 ಕೋ. ರೂ. ಹೊರೆ ಬೀಳಲಿದೆ.

ಈ ನಡುವೆ ಫೆಬ್ರವರಿ 1ರ ಮಧ್ಯಂತರ ಬಜೆಟ್‌ನಲ್ಲಿ ಮೋದಿ ಸರಕಾರ ಕೆಲವು ಸೌಲಭ್ಯಗಳನ್ನು ಘೋಷಿಸಲಿದ್ದಾರೆ ಎಂದು 50 ಲಕ್ಷ ಉದ್ಯೋಗಿಗಳು ಭರವಸೆ ಹೊಂದಿದ್ದಾರೆ. ಮಾದ್ಯಮ ವರದಿಗಳನ್ನು ನಂಬುವುದಾದರೆ, ಕೇಂದ್ರ ಸರಕಾರದ ನೌಕರರು ಕೂಡ ವೇತನ ಏರಿಕೆಯನ್ನು ನಿರೀಕ್ಷಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News